ಕರ್ನಾಟಕ

karnataka

ETV Bharat / state

ಕನ್ನಡ ಪರ ಸಂಘಟನೆಗಳಿಂದ ಬಂದ್‌ ಬದಲು ಸಾಂಕೇತಿಕ ಪ್ರತಿಭಟನೆ.. ಜಾಥಾಗೆ ಮುಂದಾದ ವಾಟಾಳ್​, ಸಾ ರಾ ಗೋವಿಂದ್‌ ಖಾಕಿ ವಶಕ್ಕೆ - ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಮಧ್ಯದಲ್ಲೇ ಠುಸ್

ಕನ್ನಡ ಪರ ಸಂಘಟನೆಗಳು ಬಂದ್ ಬದಲಿಗೆ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದವು. ಆದ್ರೆ, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಟೌನ್​ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೂ ನಡೆಯಲೇ ಇಲ್ಲ..

Kannada organizations protest off, Kannada organizations mass protest off in middle, Kannada organizations protest off in Bengaluru, Karnataka bundh cancel, ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಅರ್ಧಕ್ಕೆ ಠುಸ್​, ಕನ್ನಡ ಪರ ಸಂಘಟನೆಗಳಿಂದ ಬೃಹತ್​ ಪ್ರತಿಭಟನೆ ಮಧ್ಯದಲ್ಲೇ ಠುಸ್, ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಮಧ್ಯದಲ್ಲೇ ಠುಸ್, ಕರ್ನಾಟಕ ಬಂದ್​ ಕ್ಯಾನ್ಸಲ್​,
ವಾಟಾಳ್​, ಸಾರಾ ನೇತೃತ್ವದ ಜಾಥಾ ಮಧ್ಯದಲ್ಲೇ ಠುಸ್

By

Published : Dec 31, 2021, 2:30 PM IST

ಬೆಂಗಳೂರು :ಬಂದ್ ಬದಲಿಗೆ ಸಾಂಕೇತ ಪ್ರತಿಭಟನೆ ಕೈಗೊಂಡಿರುವ ಕನ್ನಡಪರ ಸಂಘಟನೆಯ ನಾಯಕರು ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕಾಗಿ ಕರೆ ನೀಡಿದ್ದಾರೆ. ಆದ್ರೆ, ಕನ್ನಡ ಕಟ್ಟಾಳು ವಾಟಾಳ್ ನಾಗರಾಜ್ ನೇತೃತ್ವದ ಪ್ರತಿಭಟನಾಜಾಥಾವನ್ನ ಪೊಲೀಸರು ತಡೆದಿದ್ದಾರೆ.

ನಡೆಯಲಿಲ್ಲ ವಾಟಾಳ್​, ಸಾರಾ ಗೋವಿಂದ್‌ ನೇತೃತ್ವದ ಪ್ರತಿಭಟನಾ ಜಾಥಾ

ಓದಿ:ಕೊಪ್ಪಳದ 'ಡೆತ್​ಸ್ಪಾಟ್​' ಸಣಾಪುರ ಕೆರೆಯಲ್ಲಿ ಅಸುರಕ್ಷಿತ ದೋಣಿ ವಿಹಾರ

12.30ರ ವೇಳೆಗೆ ಶುರುವಾದ ಪ್ರತಿಭಟನಾ ಮೆರವಣಿಗೆ ಮಧ್ಯದಲ್ಲೇ ಠುಸ್ ಆಗಿದೆ. ವಾಟಾಳ್ ನಾಗರಾಜ್ ಹಾಗೂ ಸಾ ರಾ ಗೋವಿಂದ್ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಹಲವಾರು ಕನ್ನಡ ಪರ ಸಂಘಟನೆಗಳು ಭಾಗಿಯಾಗಿದ್ದವು. ಟೌನ್​ ಹಾಲ್​ನಿಂದ ಕನ್ನಡ ಪರ ಸಂಘಟನೆಗಳ ಮೆರವಣಿಗೆಯಲ್ಲಿ ಮಧ್ಯಾಹ್ನದ ವೇಳೆಗೆ 150 ಪ್ರತಿಭಟನಾಕಾರರು ಕೂಡ ಇರಲಿಲ್ಲ.

ವಾಟಾಳ್​, ಸಾರಾ ಗೋವಿಂದ್‌ ನೇತೃತ್ವದ ಜಾಥಾ ಮಧ್ಯದಲ್ಲೇ ಠುಸ್

ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ , ಸಾರಾ ಗೋವಿಂದ್ ಹಾಗೂ ಇತರರು ಭಾಗಿಯಾಗಿದ್ದರೂ ಕೂಡ ಬೆಂಬಲ ಸಿಕ್ಕಲ್ಲ. ಹಲಸೂರು ಗೇಟ್ ಬಳಿ ಜಾಥಾ ತಡೆದ ಪೊಲೀಸರು ಪ್ರತಿಭಟನಾಕರರನ್ನ ವಶಕ್ಕೆ ಪಡೆದರು. ಆದ್ರೆ, ಫ್ರೀಡಂ ಪಾರ್ಕ್​ವರೆಗೂ ನಡೆಯಬೇಕಿದ್ದ ಈ ಬೃಹತ್​ ಜಾಥಾ ಅರ್ಧದಲ್ಲೇ ಠುಸ್ ಆಗಿದೆ.

ABOUT THE AUTHOR

...view details