ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಮಧ್ಯರಾತ್ರಿ 12.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಅಶೋಕ್ ರಾವ್ ಈ ಸಂಬಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ.
ಓದಿ:ಅನಧಿಕೃತ ಜಾಹೀರಾತು ಮುಕ್ತಗೊಳಿಸುವ ಅಭಿಯಾನಕ್ಕೆ ಸಹಕರಿಸಿ: ಗೌರವ್ ಗುಪ್ತಾ ಮನವಿ
ಅಶೋಕ್ ಅಗಲಿಕೆ ಬಗ್ಗೆ ನೆರೆಹೊರೆಯವರಾದ ಸುದರ್ಶನ್ ಎಂಬುವರು ಮಾಹಿತಿ ನೀಡಿದ್ದಾರೆ. ಡಾ. ರಾಜ್ ಕುಮಾರ್ ಅಭಿನಯದ ಪರಶುರಾಮ್ ಚಿತ್ರದಲ್ಲಿ ಖಳ ನಾಯಕನಾಗಿ ಸಿನಿಮಾ ಇಂಡಸ್ಟ್ರಿಗೆ ಅಶೋಕ್ ರಾವ್ ಪದಾರ್ಪಣೆ ಮಾಡಿದ್ದರು. ಅಂಕುಶ, ಸರ್ಕಸ್, ಬಾನಲ್ಲೇ ಮಧುಚಂದ್ರಕೆ ಸಿನಿಮಾ ಸೇರಿದಂತೆ ಬರೋಬ್ಬರಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಶೋಕ್ ರಾವ್ ನಟಿಸಿದ್ದಾರೆ.