ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ 2019-20, 2020-21ನೇ ಸಾಲಿನ 'ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ' ಘೋಷಿಸಿದೆ. ಈ ಪ್ರಶಸ್ತಿಗೆ 90 ನ್ಯಾಯಾಧೀಶರು ಸೇರಿ 120 ಮಂದಿ ಆಯ್ಕೆಯಾಗಿದ್ದಾರೆ. ಕನ್ನಡದಲ್ಲಿ ತೀರ್ಪು ನೀಡುವ ನ್ಯಾಯಾಧೀಶರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.
ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿ ಪರಿಗಣಿಸಿದೆ. ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ಅರ್ಜಿ ಸಲ್ಲಿಸುವ, ವಾದ ಮಂಡಿಸುವ ವಕೀಲರನ್ನು ಅಭಿಯೋಜನಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮೂಲಕ ಗುರುತಿಸಲಾಗಿದೆ. ಪ್ರಶಸ್ತಿಯು ತಲಾ 10 ಸಾವಿರ ರೂ ನಗದು ಒಳಗೊಂಡಿದೆ. 2019-20, 2020-21ನೇ ಸಾಲಿನಲ್ಲಿ ಕನ್ನಡದಲ್ಲಿ ವಾದ ಮಂಡಿಸಿದ 12 ಸರ್ಕಾರಿ ಅಭಿಯೋಜಕರು ಹಾಗೂ 18 ವಕೀಲರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ:ರಾಘವೇಂದ್ರ ವೈಜನಾಥ್, ಮಂಜುನಾಥ ಪ್ರಭಾಕರ ಪಾನಘಂಟಿ, ರೇಷ್ಮೆ ಎಚ್.ಕೆ., ಅರುಣ ಚೌಗುಲೆ, ಶಂಭುಲಿಂಗಯ್ಯ ಮೂಡಿಮಠ, ನೇಮಚಂದ್ರ, ಯತೀಶ ಆರ್., ನಾಗೇಶ ನಾಯ್ಕ, ಅಶ್ವಿನಿ ಕೋರೆ, ಜಿನ್ನಪ್ಪಾ ಚೌಗಲಾ, ಕೋಟೆಪ್ಪ ಕಾಂಬ್ಳೆ, ಜೈ ಶಂಕರ್ ಜೆ., ಪ್ರೇಮ್‌ಕುಮಾರ್, ನಾಗೇಶ ಸಿ., ಕಿಶನ್ ಬಸವಣ್ಣಿ ಮಾಡಲಗಿ, ಯೋಗೇಶ್, ರೇಖಾ ಎಚ್.ಸಿ., ಗುಡ್ಡಪ್ಪ ಬಸವಣ್ಣೆಪ್ಪ ಹಳ್ಳಕಾಯಿ, ಲಕ್ಷ್ಮಿ ಎಂ.ವಿ., ರವೀಂದ್ರಕುಮಾರ್ ಬಿ. ಕಟ್ಟಿಮನಿ, ಸಂದೇಶ ಕೆ., ಗಿರೀಶ್ ಚಟ್ಟಿ, ಸೂರ್ಯನಾರಾಯಣ ಎಸ್., ಶೈಲಾ ಎಸ್.ಎಂ., ನಳಿನ ಎಸ್.ಸಿ., ವೀರೇಶ್ ಕುಮಾರ್ ಸಿ.ಕೆ., ಭೀಮಪ್ಪ ಪೋಳ, ಅಪ್ಪಾಸಾಬ ರಾಮಪ್ಪ ನಾಯಿಕ, ಭಾಗ್ಯಲಕ್ಷ್ಮಿ, ಚೇತನಾ ಎಸ್.ಎಫ್ 2019-20ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2020-21ನೇ ಸಾಲಿನ ಪ್ರಶಸ್ತಿಗೆ ಸುಮಂಗಲಾ ಎಸ್. ಬಸವಣ್ಣೂರ್, ಸರೋಜಾ ಎಂ., ರೂಪಾ ರಾಮರಾವ್ ಕುಲಕರ್ಣಿ, ನಾಗೇಶ್ ಪಾಟೀಲ, ಜಿತೇಂದ್ರನಾಥ್ ಸಿ.ಎಸ್., ಲತಾಶ್ರೀ ಬಿ.ವಿ., ರೇಣುಕಾ ದೇವಿದಾಸ ರಾಯ್ಕರ್, ವಿಶ್ವನಾಥ ಯಮಕನಮರಡಿ, ಲೋಕೇಶ, ಶಿವಕುಮಾರ ಜಿ.ಜೆ., ಸವಿತಾ ಪಿ.ಆರ್., ಲಕ್ಷ್ಮೀಶ ಶರ್ಮ ಎನ್., ಅನಿಲ್‌ಪ್ರಕಾಶ್ ಎಂ.ಪಿ, ಕಿಶೋರ್ ಕುಮಾರ್ ಕೆ.ಎನ್., ಆನಂದ್ ಎಸ್. ಕರಿಯಮ್ಮನವರ, ನಂದಿನಿ ಎಂ.ಎನ್., ಗಾಯಿತ್ರಿ ಎಸ್. ಕಾಟೆ, ದೀಪು ಎಂ.ಟಿ., ಚಿದಾನಂದ ಬಡಿಗೇರ, ಶೃತಿಶ್ರೀ ಎಸ್., ಶ್ರೇಯಾಂಶ ದೊಡ್ಡಮನಿ, ಲಕ್ಷ್ಮೀಬಾಯಿ, ಅರವಿಂದ್ರ ಬಿ.ಸಿ., ಆದಿತ್ಯ ಆರ್. ಕಲಾಲ್, ನಾಗರತ್ನಮ್ಮ, ಲೋಕೇಶ ಸಿ.ಎನ್., ಕಿರಣ್ ಎಸ್.ಪಿ., ಕನ್ನಿಕಾ ಎಂ.ಎಸ್., ಸ್ಮಿತಾ ನಾಗಲಾಪುರ, ಹಾಜಿಹುಸೇನಸಾಬ ಯಾದವಾಡ, ಶಶಿಕಲಾ, ತಿಮ್ಮಯ್ಯ ಜಿ., ಸಂಜುಕುಮಾರ್ ಪಾಚ್ಛಾಪುರೆ, ರಘುನಾಥ ಗೌಡ ಕೆ.ಟಿ., ರೋಹಿಣಿ ಡಿ. ಬಸಾಪುರ, ಪ್ರತಿಭಾ ಡಿ.ಎಸ್., ಪದ್ಮ ಎಂ., ಕಿಶೋರ್ ಕುಮಾರ್ ಎಂ., ಈರಪ್ಪ ಢವಳೇಶ್ವರ್, ಮೋಹನ ಸದಾಶಿವ ಪೋಳ, ಕೋನಪ್ಪ ಎನ್.ವಿ., ಅಬ್ದುಲ್ ರಹಿಮಾನ್ ಎ. ಮುಲ್ಲಾ, ರಾಮಮೂರ್ತಿ ಎನ್., ಶಿವಕುಮಾರ್ ಆರ್., ಜಿ., ಗೌರಮ್ಮ, ಸಣ್ಣಹನಮಗೌಡ, ಪಾರ್ವತಮ್ಮ ಬಿ., ರೋಹಿಣಿ ಡಿ. ಬಸಾಪೂರ, ಗುರುಪ್ರಸಾದ್ ಸಿ., ಪ್ರತಿಭಾ ಡಿ.ಎಸ್., ರಾಧಾ ಎಸ್., ಮಾದೇಶ ಎಂ.ವಿ., ಸತೀಶ ಬಿ., ಶ್ರೀನಾಥ ಜೆ.ಎನ್., ಅಂಬಣ್ಣ ಕೆ., ಪ್ರತಾಪ್ ಕುಮಾರ್ ಎನ್., ಸೈಯ್ಯದ್ ಮೋಹಿದ್ದಿನ, ಕೆ. ಗೋಪಾಲಕೃಷ್ಣ, ಗಣೇಶ ಎನ್. ಹಾಗೂ ಸುಜಾತ ಎಚ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ವಕೀಲರು:ಕೆ. ಕೆಂಚಪ್ಪ, ರಾಜು ಪೂಜಾರಿ, ಅಣ್ಣಪ್ಪ ಜಟ್ಟಿ ನಾಯ್ಕ, ತನುಜಾ ಬಿ. ಹೊಸಪಟ್ಟಣ, ಬಿ. ಪ್ರಕಾಶ್ಚಂದ್ರ ಶೆಟ್ಟಿ, ಸಿದ್ಧಾರೂಡ ಎಂ. ಗೆಜ್ಜಿಹಳ್ಳಿ, ಶಾಂತಿ ಬಾಯಿ, ಪ್ರಾಣೇಶ ಭರತನೂರ, ಪ್ರಶಾಂತ್ ಶೇಖರ ತೋರಗಲ್, ಶರಣಗೌಡ ವಿ. ಪಾಟೀಲ, ಕೆ.ಎಚ್. ಶ್ರೀಮತಿ, ಚೆನ್ನಪ್ಪ ಗು. ಹರಸೂರ.
ಪ್ರಶಸ್ತಿ ಪ್ರದಾನ ಸಮಾರಂಭ: ಪ್ರಾಧಿಕಾರ ಜನವರಿ 22ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾರಂಭ ಉದ್ಘಾಟಿಸಲಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದರ್ ಪ್ರಶಸ್ತಿ ಪ್ರದಾನ ಮಾಡುವರು.
ಇದನ್ನೂ ಓದಿ:ಪ್ರೊ ಕೆ ಲಕ್ಷ್ಮ ಗೌಡರಿಗೆ ಪ್ರೊ.ಎಂಎಸ್ ನಂಜುಂಡ ರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಬಿ ಎಲ್ ಶಂಕರ್