ಕರ್ನಾಟಕ

karnataka

'ಕಮರೊಟ್ಟು ಚೆಕ್‌ಪೋಸ್ಟ್'‌ನಲ್ಲಿ ಮಿಂಚಿದ 'ಸಲಗ' ಸುಶೀಲ್ ಆತ್ಮಹತ್ಯೆಗೆ ಶರಣು

By

Published : Jul 8, 2020, 3:12 PM IST

ಆತ ಚಿತ್ರರಂಗದಲ್ಲಿ ಮಿಂಚಿ ಸಾಕಷ್ಟು ಹೆಸರು ಮಾಡಬೇಕು ಎಂದು ನೂರಾರು ಕನಸು ಕಟ್ಟಿಕೊಂಡು ಬಂದಿದ್ದ. ಹೇಗೋ ಕಷ್ಟಪಟ್ಟು ಒಂದೆರೆಡು ಚಿತ್ರಗಳಲ್ಲಿ ಸಣ್ಣ ಪಾತ್ರವನ್ನೂ ಮನೋಜ್ಞವಾಗಿ ನಿರ್ವಹಿಸಿದ್ದಾನೆ. ಆ ಚಿತ್ರಗಳು‌ ರಿಲೀಸ್ ಆಗುವ ಮೊದಲೇ ಯುವ ಪ್ರತಿಭೆ ಬಾಳ ಪಯಣ ನಿಲ್ಲಿಸಿದೆ.

ಸ್ಯಾಂಡಲ್ ವುಡ್ ಪ್ರತಿಭೆ
ಸ್ಯಾಂಡಲ್ ವುಡ್ ಪ್ರತಿಭೆ

ಬೆಂಗಳೂರು: 'ಸಲಗ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದ ನಟ ಸುಶೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶೀಲ್ ಸಾವಿಗೆ ನಿಖರ ಕಾರಣ ತಿಳಿದು ‌ಬಂದಿಲ್ಲ.

ಇತ್ತೀಚೆಗಷ್ಟೆ ಪ್ರೀತಿಸಿ ಮದುವೆಯಾಗಿದ್ದ ಸುಶೀಲ್ ಮಂಗಳವಾರ ರಾತ್ರಿ ಮಂಡ್ಯದ ತಮ್ಮ ಫಾರ್ಮ್ ಹೌಸ್​​​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿಂದೆ 'ಕಮರೊಟ್ಟು ಚೆಕ್ ಪೋಸ್ಟ್' ಸಿನಿಮಾದಲ್ಲಿ ನಟಿಸಿದ್ದ ಯುವನಟ ಇದೀಗ 'ಸಲಗ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

'ಕಮರೊಟ್ಟು ಚೆಕ್ ಪೋಸ್ಟ್' ಸಿನಿಮಾದ ಪೋಸ್ಟರ್‌ನಲ್ಲಿ ನಟ ಸುಶೀಲ್

ಈ ಚಿತ್ರ ಬಿಡುಗಡೆಗೂ ಮುನ್ನವೇ ಸುಶೀಲ್ ಸಾವನ್ನಪ್ಪಿದ್ದು, ಚಿತ್ರತಂಡ ಕಂಬನಿ ಮಿಡಿದಿದೆ. ಅವರ ಕಷ್ಟ ಏನೇ ಆಗಿರಲಿ, ನಮ್ಮ ಬಳಿ ಹೇಳಿದ್ದರೆ ನಾವು ಸಹಾಯ ಮಾಡಬಹುದಿತ್ತು. ತಮ್ಮ ಕಷ್ಟ ಹೇಳಿಕೊಳ್ಳದೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಸುಶೀಲ್ ಸಾವಿಗೆ ನಟ ದುನಿಯಾ ವಿಜಿ ಕೂಡ ಸಂತಾಪ ಸೂಚಿಸಿ, ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ABOUT THE AUTHOR

...view details