ಕರ್ನಾಟಕ

karnataka

ETV Bharat / state

140 ದಿನದ 'ಪಂಜರ'ವಾಸ ಅನುಭವಿಸಿದ ರಾ'ಗಿಣಿ'ಗೆ ಬಿಡುಗಡೆ ಭಾಗ್ಯ - ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನಾರಿಮನ್ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

Ragini
ರಾಗಿಣಿ ದ್ವಿವೇದಿ

By

Published : Jan 21, 2021, 2:26 PM IST

ಆನೇಕಲ್: ಸ್ಯಾಂಡಲ್​ವುಡ್​​ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದೆ.

ಈ ಹಿಂದೆ 2020 ಸೆಪ್ಟೆಂಬರ್ 14ರಲ್ಲಿ ಮಾದಕದ್ರವ್ಯ ನಂಟು ಆರೋಪದಲ್ಲಿ ರಾಗಿಣಿ ಬಂಧನವಾಗಿತ್ತು. ಇದೀಗ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾರಿಮನ್ ಅವರು ರಾಗಿಣಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ.

ಈ ಹಿಂದೆ ಸೆಷನ್ಸ್ ಮತ್ತು ಹೈಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ ರಾಗಿಣಿ ಪರ ವಕೀಲರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಇಂದಿಗೆ ಮುಂದೂಡಲಾಗಿತ್ತು. ಇದೀಗ ರಾಗಿಣಿಗೆ ಜಾಮೀನು ಮಾಂಜೂರಾಗುವ ಮೂಲಕ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಹೀಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಜಾಮೀನು ಆದೇಶ ತಲುಪುವಷ್ಟರಲ್ಲಿ ಮಧ್ಯಾಹ್ನ ಮುಗಿದು ಕಾರಾಗೃಹದಲ್ಲಿನ ಎಲ್ಲ ಬಿಡುಗಡೆ ಪ್ರಕ್ರಿಯೆಗಳ ಬಳಿಕ ಬಿಡುಗಡೆಗೊಳ್ಳುವಷ್ಟರಲ್ಲಿ ಸಂಜೆ ಆಗಲಿದೆ.

ABOUT THE AUTHOR

...view details