ಬೆಂಗಳೂರು : ನಗರದ ರಸ್ತೆಗಳಲ್ಲಿ ಅದೆಷ್ಟೋ ಗುಂಡಿಗಳಿದ್ದು, ಅವನ್ನು ಮುಚ್ಚಲು ಬಿಬಿಎಂಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುಕ್ಕಾಣಿಯನ್ನು ಬಿಜೆಪಿ ಹಿಡಿದಾಗಿನಿಂದ ಮೇಯರ್ ಆಯ್ಕೆ ವಿಚಾರವಾಗಿ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಬಿಜೆಪಿ ಸಂಘ ಪರಿವಾರದ ನಿರ್ಧಾರದಂತೆ ಗೌತಮ ಕುಮಾರ್ ಜೈನ್ ಅವರನ್ನು ಕನ್ನಡಪರ ಸಂಘಟನೆಗಳ ವಿರೋಧದ ನಡುವೆಯೂ ಮೇಯರ್ ಆಗಿ ಆಯ್ಕೆ ಮಾಡಲಾಯಿತು.
ಕನ್ನಡ ವಿರೋಧಿ ಎಂಬ ಮಾತನ್ನು ಸುಳ್ಳು ಮಾಡಲೆಂದು ಮೇಯರ್ ಗೌತಮ ಕುಮಾರ್ ನವೆಂಬರ್ 1 ರಿಂದ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ಕಡ್ಡಾಯ ಎಂದು ಆದೇಶಿಸಿದರು. ಆದರೂ ಹಾಳಾಗಿರುವ ರಸ್ತೆಗಳ ವಿಚಾರವಾಗಿ ಮೇಯರ್ ನವೆಂಬರ್ 10 ನೇ ತಾರೀಖಿನವರೆಗೂ ಸಮಯ ಕೇಳಿದ್ದರು. ಇದುವರೆಗೂ ಯಾವುದೇ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಶುರುವಾಗದ ಹಿನ್ನೆಲೆ ಮತ್ತೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
‘ಗುಂಡಿ ದೀಪಾವಳಿ’ ವಿಶೇಷ ಪ್ರತಿಭಟನೆ ಈ ಹಿಂದೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡಿದಾಗ ಮೇಯರ್ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು.