ಕರ್ನಾಟಕ

karnataka

ETV Bharat / state

ಕನಕ ಜಯಂತಿ: ಟ್ವಿಟ್ಟರ್​ನಲ್ಲಿ ಶುಭ ಕೋರಿದ ಹೆಚ್​ಡಿಡಿ, ಹೆಚ್​ಡಿಕೆ - ಕನಕ ಜಯಂತಿ ಶುಭ ಕೋರಿದ ದೇವೇಗೌಡ

ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಕನಕ ಜಯಂತಿಯ ಶುಭಾಶಯ ತಿಳಿಸಿದ್ದಾರೆ.

ಕುಮಾರಸ್ವಾಮಿ

By

Published : Nov 15, 2019, 12:53 PM IST

Updated : Nov 22, 2021, 1:04 PM IST

ಬೆಂಗಳೂರು: ಕನಕ ಜಯಂತಿ ಅಂಗವಾಗಿ ಸಮಸ್ತ ಕನ್ನಡ ನಾಡಿನ ಜನತೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ.

ಕರ್ನಾಟಕ ಕೀರ್ತನಾ ಸಾಹಿತ್ಯದ ಅಶ್ವಿನಿ ದೇವತೆಯಾಗಿರುವ ಕನಕದಾಸರ ಕೀರ್ತನೆಗಳು ಮನುಜ ಕುಲವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಂಥದ್ದು ಎಂದು ದೇವೇಗೌಡರು ಬಣ್ಣಿಸಿದ್ದಾರೆ. ಸಮ ಸಮಾಜದ ನಿರ್ಮಾಣಕ್ಕಾಗಿ ಕೀರ್ತನೆಗಳ ಮೂಲಕವೇ ಅರಿವು ಮೂಡಿಸಿದ ದಾಸ ಶ್ರೇಷ್ಠರು ಕನಕದಾಸರು ಎಂದು ಗುಣಗಾನ ಮಾಡಿದ್ದಾರೆ.

ಟ್ವಿಟ್ಟರ್​ನಲ್ಲಿ ಶುಭ ಕೋರಿರುವ ಮಾಜಿ ಸಿಎಂ ಕುಮಾರಸ್ವಾಮಿ, ಜಾತಿ ಮತಗಳ ಕಟ್ಟು ಪಾಡುಗಳಿಲ್ಲದೇ ತಮ್ಮ ಅನುಭವದಿಂದ ಹೊರಹೊಮ್ಮುವ ಭಕ್ತಿ ಭಾವನೆಗಳನ್ನು ತಾಯ್ನುಡಿಯಲ್ಲಿ ಹಾಡಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಅತ್ಯಮೂಲ್ಯವಾದ ಕೊಡುಗೆ ನೀಡಿದ ದಾಸಶ್ರೇಷ್ಠರು ಕನಕದಾಸರು ಎಂದು ಹೇಳಿದ್ದಾರೆ.

Last Updated : Nov 22, 2021, 1:04 PM IST

ABOUT THE AUTHOR

...view details