ಕರ್ನಾಟಕ

karnataka

By

Published : Nov 2, 2020, 2:36 PM IST

ETV Bharat / state

ಚುನಾವಣೆಯಲ್ಲಿ ಅಹಿತಕರ ಘಟನೆ ನಡೆಸಲು ಮುಂದಾದ್ರೆ ಸೂಕ್ತ ಕ್ರಮ: ಕಮಲ್ ಪಂತ್​ ಎಚ್ಚರಿಕೆ

ಮತದಾರರನ್ನ ಸೆಳೆಯಲು ಕೆಲವರು ಈಗಾಗಲೇ ಹಣದ ಆಮಿಷವೊಡ್ಡಿದ್ದಾರೆ ಎಂಬ ‌ಕೆಲವೊಂದು ವಿಡಿಯೋಗಳು ವೈರಲ್ ಆಗಿದ್ದವು. ಹೀಗಾಗಿ, ಇದರ ಬಗ್ಗೆ ನಾವು ಗಮನ ಹರಿಸಿದ್ದೇವೆ ಎಂದು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ತಿಳಿಸಿದ್ದಾರೆ. ಅಲ್ಲದೆ, ಯಾವುದೇ ಅಹಿತಕರ ಘಟನೆ ನಡೆಸಲು ಮುಂದಾದ್ರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

City Police Commissioner Kamal Panth spoke
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿದರು

ಬೆಂಗಳೂರು: ಆರ್.ಆರ್. ನಗರ ಉಪಚುನಾವಣೆ ಹಿನ್ನೆಲೆ ಸದ್ಯ ನಾಳೆ ಚುನಾವಣೆ ನಡೆಯಲಿದ್ದು, ಯಾರೇ ಅಹಿತಕರ ಘಟನೆ ನಡೆಸಲು ಮುಂದಾದ್ರೆ, ಅಂತವರನ್ನು ವಶಕ್ಕೆ ಪಡೆಯಲಾಗುವುದು ಎಂದು ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮತದಾರರನ್ನ ಸೆಳೆಯಲು ಕೆಲವರು ಈಗಾಗಲೇ ಹಣದ ಆಮಿಷವೊಡ್ಡಿದ್ದಾರೆ ಎಂಬ ‌ಕೆಲವೊಂದು ವಿಡಿಯೋಗಳು ವೈರಲ್ ಆಗಿವೆ. ಹೀಗಾಗಿ, ಇದರ ಬಗ್ಗೆ ಕೂಡ ನಾವು ಗಮನ ಹರಿಸಿದ್ದೇವೆ ಎಂದು ತಿಳಿಸಿದರು.

ಭದ್ರತೆ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ

ಸದ್ಯ 678 ಮತಗಟ್ಟೆಗಳು ಇದ್ದು, ಹೀಗಾಗಿ ಇದನ್ನು 141 ಲೋಕೇಷನ್ ಆಗಿ ಗುರುತಿಸಲಾಗಿದೆ. ಇದರಲ್ಲಿ 82 ಕ್ರಿಟಿಕಲ್ ಬೂತ್​ಗಳು ಇದ್ದು, 596 ಮಂದಿ ನಾರ್ಮಲ್ ಬೂತ್​ಗಳಿವೆ. ಹಾಗೆಯೇ ಪಿಎಸ್​ಐ, ಎಸ್ ಐ ಲೆವೆಲ್​ನಲ್ಲಿ 36 ಮೊಬೈಲ್ ಬಳಸಲಾಗುವುದು. ಪಿಎಸ್​ಐ ಲಾ ಆ್ಯಂಡ್ ಆರ್ಡರ್ ಪೊಲೀಸರು ಇದನ್ನ ನೋಡಿಕೊಳ್ಳಲಿದ್ದಾರೆ. ಹಾಗೆಯೇ ಭದ್ರತೆಗಾಗಿ ಎಸಿಪಿ 8, ಇನ್ಸ್​ಪೆಕ್ಟರ್​​ 30, ಸಬ್ ಇನ್ಸ್​ಪೆಕ್ಟರ್ 94, ಎಸ್ ಐ 185, ಹೆಡ್ ಕಾನ್ಸ್​ಟೇಬಲ್ಸ್​, ಕಾನ್ಸ್​ಟೇಬಲ್ಸ್​ 1546, ಹೋಮ್​ ಗಾರ್ಡ್ 699, ಒಟ್ಟು 2563 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ‌ ಎಂದರು.‌

ಹಾಗೆಯೇ, ಫ್ಲೈಯಿಂಗ್ ಸ್ಕ್ವಾಡ್ 40, ಚೆಕ್ ಪೋಸ್ಟ್ 09, ಸಿಎಎಸ್​ಎಫ್ 3, ಕೆ.ಎಸ್ ಆರ್ ಪಿ19, ಸಿಎಆರ್ 20 ಅಳವಡಿಕೆ ಮಾಡಲಾಗಿದೆ. ನಿನ್ನೆ ಸಂಜೆಯಿಂದ 4ನೇ ತಾರೀಖಿನವರೆಗೆ 144 ಸೆಕ್ಷನ್ ಹಾಕಲಾಗಿದೆ. ಆರ್ ಆರ್ ನಗರ ವ್ಯಾಪ್ತಿಯಲ್ಲಿ ನಿನ್ನೆ ಯಿಂದ ನಾಳೆ 3 ರವರೆಗೆ ಮಧ್ಯ ನಿಷೇಧ ಮಾಡಲಾಗಿದೆ‌. ‌ಹಾಗೆಯೇ 32 ಹೊಯ್ಸಳ ವ್ಯವಸ್ಥೆ, 91 ಚೀತಾ ವಾಹನ ಅಳವಡಿಕೆ ಮಾಡಲಾಗಿದೆ‌. ಇದರೊಂದಿಗೆ‌ ಇವತ್ತು ಮತ್ತು ನಾಳೆ ಹೊರಗಡೆ ವ್ಯಕ್ತಿಗಳಿಗೆ ಬರಲು ಅವಕಾಶ ಇರಲ್ಲ. ಇಡೀ ಚುನಾವಣಾ ಪ್ರಕ್ರಿಯೆ ಶಾಂತ ರೀತಿಯಿಂದ ಆಗುತ್ತದೆ. ಚುನಾವಣೆಯಲ್ಲಿ ಭಾಗವಹಿಸುವಾಗ ಎಲ್ಲಾರು ಕೊರೊನಾ ನಿಯಮ ಪಾಲಿಸಲೇಬೇಕು ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details