ಬೆಂಗಳೂರು: ಚಂದ್ರು ಹತ್ಯೆ ಪ್ರಕರಣದ ವಿಚಾರಣೆಯನ್ನು ಅಧಿಕೃತವಾಗಿ ಡಿಜಿ ಐಜಿಪಿ ಪ್ರವೀಣ್ ಸೂದ್ ಕಚೇರಿಯಿಂದ ಸಿಐಡಿಗೆ ವರ್ಗಾವಣೆ ಮಾಡಲಾಗುತ್ತಿದೆ. ಸಿಐಡಿಗೆ ವಹಿಸುವ ಕುರಿತು ಭಾನುವಾರ ಸಿಎಂ ಬೊಮ್ಮಾಯಿ ಮಾಹಿತಿ ಪ್ರಕರಣ ವರ್ಗಾವಣೆ ವಿಚಾರವಾಗಿ ಕಮಿಷನರ್ ಕಮಲ್ ಪಂತ್ ಡಿಜಿ ಐಜಿಪಿ ಕಚೇರಿಗೆ ಪತ್ರ ಬರೆದಿದ್ದರು. ಕಮಿಷನರ್ ಪತ್ರದ ಬಳಿಕ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಶೀಘ್ರದಲ್ಲೇ ಅಧಿಕೃತ ಆದೇಶ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಚಂದ್ರು ಹತ್ಯೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲು ಕಮಲ್ ಪಂತ್ ಪತ್ರ, ಅಧೀಕೃತ ಆದೇಶ ಬಾಕಿ
ಎಫ್‌ಐಆರ್ ಸ್ಥಳೀಯರ/ಪ್ರತ್ಯಕ್ಷದರ್ಶಿಗಳ ಹೇಳಿಕೆ, ಸಿಸಿಟಿವಿ ದೃಶ್ಯ, ದೂರುದಾರರ ಆರೋಪ, ಪ್ರಮುಖ ಸಾಕ್ಷಿಯಾದ ಸೈಮನ್ ಪಂಚನಾಮೆ ಸೇರಿದಂತೆ ಇಡಿಗೆ ಕೇಸ್ ಫೈಲ್ ಹಸ್ತಾಂತರಿಸಲಾಗುತ್ತದೆ. ಅಧಿಕೃತ ಆದೇಶ ಕೈಸೇರಿದ ಬಳಿಕ ಸಿಐಡಿ ತನಿಖಾ ತಂಡ ಹೆಚ್ಚಿನ ವಿಚಾರಣೆ ಕೈಗೆತ್ತಿಕೊಳ್ಳಲಿದೆ..
ಬೆಂಗಳೂರಿನ ಚಂದ್ರು ಹತ್ಯೆ ಪ್ರಕರಣ
ಇದನ್ನೂ ಓದಿ:ಪಾಕ್ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆ: ಇಂದೇ ಪ್ರಮಾಣ ವಚನ
ಈ ಮೂಲಕ ಪ್ರಕರಣದ ಫೈಲ್ ಜೆಜೆನಗರ ಪೊಲೀಸರಿಂದ ಸಿಐಡಿಗೆ ಹಸ್ತಾಂತರವಾಗಲಿದೆ. ಎಫ್‌ಐಆರ್ ಸ್ಥಳೀಯರ/ಪ್ರತ್ಯಕ್ಷದರ್ಶಿಗಳ ಹೇಳಿಕೆ, ಸಿಸಿಟಿವಿ ದೃಶ್ಯ, ದೂರುದಾರರ ಆರೋಪ, ಪ್ರಮುಖ ಸಾಕ್ಷಿಯಾದ ಸೈಮನ್ ಪಂಚನಾಮೆ ಸೇರಿದಂತೆ ಇಡಿಗೆ ಕೇಸ್ ಫೈಲ್ ಹಸ್ತಾಂತರಿಸಲಾಗುತ್ತದೆ. ಅಧಿಕೃತ ಆದೇಶ ಕೈಸೇರಿದ ಬಳಿಕ ಸಿಐಡಿ ತನಿಖಾ ತಂಡ ಹೆಚ್ಚಿನ ವಿಚಾರಣೆ ಕೈಗೆತ್ತಿಕೊಳ್ಳಲಿದೆ.