ಬೆಂಗಳೂರು:ಹೊಸ ವರ್ಷಾಚರಣೆಗೆ ಕ್ಷಣಗಣನೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೊಲೀಸರು ಅಲರ್ಟ್ ಆಗಿದ್ದಾರೆ. ರೂಪಾಂತರ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಯಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವರ್ಷ ಆಚರಣೆಗೆ ಕೆಲವು ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ.
ಸಿಲಿಕಾನ್ ಸಿಟಿಯ ಕೆಲವೊಂದು ಗುರುತರ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿ ನಡೆಯುತ್ತದೆ. ಹೀಗಾಗಿ ವಿಶೇಷವಾಗಿ ಎಂ.ಜಿ ರೋಡ್, ಬಿಗ್ರೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರವನ್ನು 'No Man Zone' ಎಂದು ಘೋಷಣೆ ಮಾಡಿದ್ದಾರೆ.
ನೋ ಮ್ಯಾನ್ ಝೋನ್ ಅಂದ್ರೆ ನಗರದ ಮೇಲ್ಕಂಡ ಐದು ಪ್ರದೇಶಗಳಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ 144 ಸೆಕ್ಷನ್ ಜಾರಿ ಇದ್ದು ನಾಳೆ ಮುಂಜಾನೆ 6 ಗಂಟೆಯವರೆಗೆ ಮೇಲ್ಕಂಡ ಐದು ಪ್ರದೇಶದಲ್ಲಿ ಜನರು ಓಡಾಟ ಮಾಡುವ ಆಗಿಲ್ಲ.
ಈ ಐದು ಪ್ರದೇಶಗಳಲ್ಲಿರುವ ಪಬ್, ಬಾರ್, ಹೋಟೆಲ್ ರೆಸ್ಟೋರೆಂಟ್ಗಳಲ್ಲಿ ಮುಂಗಡವಾಗಿ ಬುಕ್ಕಿಂಗ್ ಬುಕ್ ಮಾಡಿರುವ ಸದಸ್ಯರಿಗೆ ಮಾತ್ರ ಅವಕಾಶ ಇರುತ್ತದೆ. ಈ ಸ್ಥಳದಲ್ಲಿಅನವಶ್ಯಕವಾಗಿ ಬೈಕ್‌ನಲ್ಲಿ ಸುತ್ತಾಟ, ವ್ಹಿಲಿಂಗ್, ಜಾಲಿರೇಡ್ ನಿಷೇಧಿಸಲಾಗಿದೆ.
ಒಂದು ವೇಳೆ ಈ ಆದೇಶ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಲ್ಲದೆ, ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತ ಎಚ್ಚರಿಕೆ ನೀಡಿದ್ದಾರೆ.