ಕರ್ನಾಟಕ

karnataka

ETV Bharat / state

ಕಾಮಾಕ್ಷಿಪಾಳ್ಯ ಇನ್ಸ್​ಪೆಕ್ಟರ್​​ಗೆ ಕೊರೊನಾ: ಆಡಿಯೋ ಮೂಲಕ ಧೈರ್ಯ ತುಂಬುವ ಮಾತು!

ಕಾಮಾಕ್ಷಿಪಾಳ್ಯ ಇನ್ಸ್​ಪೆಕ್ಟರ್​ಗೆ ಕಳೆದ ವಾರ ಪಾಸಿಟಿವ್ ಬಂದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಇನ್ಸ್​ಪೆಕ್ಟರ್ ಆಸ್ಪತ್ರೆಯಲ್ಲಿದ್ದುಕೊಂಡೇ ಎಲ್ಲರಿಗೂ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

corona-positive
ಇನ್ಸ್​ಪೆಕ್ಟರ್​​ಗೆ ಪಾಸಿಟಿವ್

By

Published : Jul 7, 2020, 3:59 PM IST

ಬೆಂಗಳೂರು:ಕೊರೊನಾ ಸೋಂಕು ಎಂದರೆ ಸಾಕು ಜನ ಭಯದಿಂದ ನಡುಗುತ್ತಿದ್ದಾರೆ. ಆದರೆ‌ ಕೋವಿಡ್​​ಗೆ ತುತ್ತಾದರೂ ಪೊಲೀಸ್ ಇನ್ಸ್​ಪೆಕ್ಟರ್ ಒಬ್ಬರು​​ ಇಲಾಖೆಯ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಇದ್ದುಕೊಂಡೇ ಧೈರ್ಯ ತುಂಬಿದ್ದಾರೆ.

ಕಾಮಾಕ್ಷಿಪಾಳ್ಯ ಇನ್ಸ್​ಪೆಕ್ಟರ್​ಗೆ ಕಳೆದ ವಾರ ಪಾಸಿಟಿವ್ ಬಂದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಇನ್ಸ್​ಪೆಕ್ಟರ್ ಆಸ್ಪತ್ರೆಯಲ್ಲಿದ್ದುಕೊಂಡೇ ಎಲ್ಲರಿಗೂ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಆಡಿಯೋ ಮೂಲಕ ಇಲಖೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಇನ್ಸ್​ಪೆಕ್ಟರ್​​​ ಜಾಗೃತಿ

ಯಾರೂ ಹೆದರಬೇಡಿ, ಧೈರ್ಯವಾಗಿರಿ. ಕೊರೊನಾ ಬಂದಾಗ ಆತಂಕ ಬೇಡ, ಇದೊಂದು ಕಾಯಿಲೆ ಅಷ್ಟೇ. ಹೆದರುವ ಅಗತ್ಯವಿಲ್ಲ. ಯಾರಿಗೂ ಏನೂ ಆಗುವುದಿಲ್ಲ. ಮೃತರೆಲ್ಲರೂ ಕೊರೊನಾದಿಂದಲೇ ಸತ್ತಿಲ್ಲ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಕೆಲ ಪೊಲೀಸರು ಚೆನ್ನಾಗಿ ಡ್ಯೂಟಿ ಮಾಡುತ್ತಿದ್ದಾರೆ, ಕೆಲವರು ಹೆದರುತ್ತಿದ್ದಾರೆ. ಗಾಬರಿಯಾಗಬೇಡಿ, ಪೊಲೀಸರು ಹಾಗೂ ಸಾರ್ವಜನಿಕರಲ್ಲಿ ಯಾರಿಗೆಲ್ಲಾ ಬಿಪಿ‌, ಶುಗರ್ ಇದೆಯೋ ಅವರು ಆಸ್ಪತ್ರೆಗೆ ಹೊಗಿ ಚಿಕಿತ್ಸೆ ಪಡೆದು‌ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಹಾಗೆಯೇ ನಾನು ಕೂಡ ಹುಷಾರಾಗಿದ್ದೇನೆ. ಆದಷ್ಟು ಬೇಗ ಬಿಡುಗಡೆಯಾಗಿ ಡ್ಯೂಟಿಗೆ ಬರ್ತಿನಿ ಎಂದು ಎಲ್ಲಾರಿಗೂ ಧೈರ್ಯ ತುಂಬಿದ್ದಾರೆ.

ABOUT THE AUTHOR

...view details