ಆನೇಕಲ್:ಇತ್ತೀಚೆಗೆಆನೇಕಲ್ ತಾಲೂಕಿನ ರಾಗಿಹಳ್ಳಿ ಅರಣ್ಯ ವಲಯದ 101 ಗುಡಿ ಬಯಲಿನ ಕಾಡಿನಲ್ಲಿ 40 ವರ್ಷದ ಕಾಡಾನೆಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಈ ಆನೆ ಮಳೆಯ ತೇವದಿಂದ ಕಣ್ಣು ಕಾಣದೇ ಜಾರಿ ಬಿದ್ದಾಗ ಮರದ ಕೊಂಬೆ ಹೊಟ್ಟೆಗೆ ಹೊಕ್ಕಿದ್ದರಿಂದ ಸಾವನ್ನಪ್ಪಿದೆ ಎಂದು ಕಲ್ಕೆರೆ ಡಿಸಿಎಫ್ ಬಿ.ಎನ್.ಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಆನೆಯ ಕಳೇಬರ ಸ್ಥಿತಿ ಬಗ್ಗೆ ಪ್ರಾಣಿಪ್ರಿಯರಿಗೆ ಸಂಶಯ ಮೂಡಿತ್ತು. ಹೀಗಾಗಿ, ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಜೂನ್ 22ರಂದು ಮೃತಪಟ್ಟ ಕಾಡಾನೆಯ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಈ ವರದಿ ಹಾಗೂ ಅರಣ್ಯಾಧಿಕಾರಿಗಳ ಪರಿಶೀಲನೆ ನಡೆಸಿರುವ ಮಾಹಿತಿ ಪ್ರಕಾರ, ಕಾಡಾನೆ ಮಳೆ ತೇವದಿಂದ ಕಣ್ಣು ಕಾಣದೇ ಜಾರಿ ಬಿದ್ದಾಗ ಮರದ ಕೊಂಬೆ ಹೊಟ್ಟೆಗೆ ಹೊಕ್ಕಿದ್ದರಿಂದ ಸಾವನ್ನಪ್ಪಿದೆ.