ಕರ್ನಾಟಕ

karnataka

ETV Bharat / state

ಕಲ್ಬುರ್ಗಿ ಹತ್ಯೆ ಪ್ರಕರಣ: ಆರ್ಥಾರ್​ ಜೈಲಿನಲ್ಲಿರುವ ಆರೋಪಿ ಬೆನ್ನತ್ತಿದ ಎಸ್ಐ​ಟಿ - ಆರ್ಥಾರ್​

ಪ್ರೊ.ಕಲ್ಬುರ್ಗಿ ಹತ್ಯೆ ಕೇಸ್​ ತನಿಖೆ ಚುರುಕುಗೊಳಿಸಿರುವ ಎಸ್​ಐಟಿ ತಂಡ ತನಿಖೆಯ ಮೊದಲ ಭಾಗವಾಗಿ ಮುಂಬೈನ ಆರ್ಥಾರ್ ಜೈಲಿನಲ್ಲಿರುವ ಆರೋಪಿ ಮೆಕಾನಿಕ್ ಸೂರ್ಯವಂಶಿ ಬೆನ್ನು ಬಿದ್ದಿದ್ದಾರೆ.

ಪ್ರೊ.ಎಂ.ಎಂ.ಕಲ್ಬುರ್ಗಿ

By

Published : Mar 14, 2019, 12:48 PM IST

Updated : Mar 14, 2019, 3:27 PM IST

ಬೆಂಗಳೂರು: ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಇತ್ತೀಚೆಗಷ್ಟೆ ಕೇಸ್ ತನಿಖೆ ಕೈಗೆತ್ತಿಕೊಂಡಿದ್ದ ಎಸ್ಐಟಿ, ತನಿಖೆಯ ಮೊದಲ ಭಾಗವಾಗಿ ಮುಂಬೈನ ಆರ್ಥಾರ್ ಜೈಲಿನಲ್ಲಿರುವ ಆರೋಪಿ ಮೆಕಾನಿಕ್ ಸೂರ್ಯವಂಶಿ ಬೆನ್ನು ಬಿದಿದ್ದಾರೆ‌.

ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಇತ್ತೀಚೆಗಷ್ಟೆ ಕೇಸ್ ತನಿಖೆ ಕೈಗೆತ್ತಿಕೊಂಡಿದ್ದ ಎಸ್ಐಟಿ, ತನಿಖೆಯ ಮೊದಲ ಭಾಗವಾಗಿ ಮುಂಬೈನ ಆರ್ಥಾರ್ ಜೈಲಿನಲ್ಲಿರುವ ಆರೋಪಿ ಮೆಕಾನಿಕ್ ಸೂರ್ಯವಂಶಿ ಬೆನ್ನು ಬಿದಿದ್ದಾರೆ‌.

ಈತನೇ ಕಲ್ಬುರ್ಗಿ ಹತ್ಯೆಗೆ ಬೈಕ್ ಒದಗಿಸಿ ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಸಿಐಡಿ ಸಹ ಬಾಡಿ ವಾರೆಂಟ್ ಮೇಲೆ ಆರೋಪಿ ವಿಚಾರಣೆ ನಡೆಸಿತ್ತು. ಆದರೆ ಈ ವೇಳೆ ಸೂಕ್ತ ಮಾಹಿತಿ ಸಿಗದೇ ಸುಮ್ಮನಾಗಿತ್ತು.

ಕಲ್ಬುರ್ಗಿ ಹತ್ಯೆಗೂ ಎರಡು ತಿಂಗಳು ಮುನ್ನ (ಜೂನ್​ನಲ್ಲಿ) ಬೈಕ್​ ಕಳ್ಳತನ ಮಾಡಿ ಅಮೋಲ್​ ಕಾಳೆಗೆ ಸೂರ್ಯವಂಶಿ ಕದ್ದ ಬೈಕ್​ ನೀಡಿದ್ದ. ಇದೇ ಬೈಕ್​ ಬಳಸಿ 2015ರ ಆಗಸ್ಟ್​ 30ರಂದು ಹಂತಕರು ಕಲ್ಬುರ್ಗಿ ಅವರನ್ನು ಹತ್ಯೆ ಮಾಡಿದ್ದರು ಎಂದು ಶಂಕಿಸಲಾಗಿದೆ.

ಕಲ್ಬುರ್ಗಿ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿಯಾಗದ ಹಿನ್ನೆಲೆಯಲ್ಲಿ ಗರಂ ಆಗಿದ್ದ ಸುಪ್ರೀಂ ಕೋರ್ಟ್​, ತ್ವರಿತವಾಗಿ ತನಿಖೆ ಮುಗಿಸುವಂತೆ ಆದೇಶಿಸಿತ್ತು.

ಹತ್ಯೆಗೆ 40 ಸಿಮ್ ಬಳಕೆ:
ಇನ್ನು ಕಲ್ಬುರ್ಗಿ ಹತ್ಯೆಗೆ ಆರೋಪಿಗಳು ಹಲವು ಸಿಮ್ ಕಾರ್ಡ್​​ಗಳನ್ನು ಬಳಕೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಲ್ಬುರ್ಗಿ ಅವರ ‌ಮನೆಯ ಸುತ್ತ ಮುತ್ತ ಟವರ್ ಲೋಕೇಷನ್ ಚೆಕ್ ಮಾಡಲಾಗಿದೆ. ಗೌರಿ ಹತ್ಯೆ ಪ್ರಮುಖ ಮಾಸ್ಟರ್ ಮೈಂಡ್ ಅಮೋಲ್ ಕಾಳೆ ವಶಕ್ಕೆ ಪಡೆಯಲು ಎಸ್ಐಟಿ ತಂಡ ಸಿದ್ಧತೆ ನಡೆಸಿದೆ. ಒಟ್ಟಾರೆ ಗೌರಿ ಹತ್ಯೆ ಪ್ರಕರಣದಂತೆ ಕಲ್ಬುರ್ಗಿ ಕೇಸ್​ಗೆ ತಾರ್ಕಿಕ ಅಂತ್ಯ ಕಾಣಿಸಲು ಎಸ್ಐಟಿ ಸಿದ್ದತೆ ನಡೆಸಿದೆ.

Last Updated : Mar 14, 2019, 3:27 PM IST

For All Latest Updates

ABOUT THE AUTHOR

...view details