ಕರ್ನಾಟಕ

karnataka

ETV Bharat / state

ಧನ್ವೀರ್ ಅಭಿನಯದ ಕೈವ ಚಿತ್ರದ ಚಿತ್ರೀಕರಣ ಮುಕ್ತಾಯ.. ಕುಂಬಳಕಾಯಿ ಒಡೆದ ಚಿತ್ರತಂಡ - ಕೈವ ಸಿನಿಮಾದ ಚಿತ್ರೀಕರಣ

ಶೋಕ್ದಾರ್ ಧನ್ವೀರ್ ಅಭಿನಯದ ಕೈವ ಸಿನಿಮಾದ ಚಿತ್ರೀಕರಣ ಕಂಪ್ಲೀಟ್​ - ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಕೈವ ಚಿತ್ರ - ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲರಿವ ಚಿತ್ರತಂಡ.

kaiva movie
ಕೈವ ಚಿತ್ರ

By

Published : Jan 30, 2023, 10:45 PM IST

ಬಜಾರ್ ಚಿತ್ರದಿಂದ ಸ್ಯಾಂಡಲ್​ವುಡ್​ನ ಶೋಕ್ದಾರ್ ಅಂತಾ ಕರೆಯಿಸಿಕೊಂಡ ನಟ ಧನ್ವೀರ್ ಅವರ ಬೈ ಟು ಲವ್ ಸಿನಿಮಾ ಬಳಿಕ ಔಟ್ ಅಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಕೈವ. ವಿಭಿನ್ನ ಟೈಟಲ್ ಹಾಗೂ ಫಸ್ಟ್ ಲುಕ್​ನಿಂದಲೇ ಸಾಕಷ್ಟು ಸುದ್ದಿ ಮಾಡಿದೆ ಕೈವ ಚಿತ್ರ. ಈಗಾಗಲೇ ಕಮರ್ಷಿಯಲ್ ಆ್ಯಕ್ಷನ್ ಲವ್ ಸ್ಟೋರಿ ಸಿನಿಮಾಗಳ ಮೂಲಕವೇ ಪ್ರಖ್ಯಾತಿಗಳಿಸಿರುವಂತಹ ಧನ್ವೀರ್ ಕೈವ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ವಿಭಿನ್ನ ರೀತಿಯಲ್ಲಿ ಎಂಟ್ರಿ ಕೊಡ್ತಿದ್ದಾರೆ.

ಪೋಸ್ಟರ್ ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡಿದ ಧನ್ವೀರ್ ನಟನೆಯ ಕೈವ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಮಾಡುವ ಮೂಲಕ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿರುವಂತಹ ಹೆಸರಾಂತ ನಿರ್ದೇಶಕ ಜಯತೀರ್ಥ ಕೈವ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಟೈಟಲ್ ಮತ್ತು ವಿಭಿನ್ನ ಫಸ್ಟ್ ಲುಕ್ ನಿಂದಲೇ ಕೈವ ಸಿನಿಮಾ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ.

ಇನ್ನು, ತ್ರಿಬಲ್ ರೈಡಿಂಗ್ ಆದ್ಮಲೇ ಮೇಘಾ ಶೆಟ್ಟಿ ಮೊದಲ ಬಾರಿಗೆ ಧನ್ವೀರ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯತೀರ್ಥ ಮತ್ತು ಧನ್ವೀರ್ ಕಾಂಬಿನೇಷನ್​ನ ಈ ಸಿನಿಮಾವನ್ನು ಅಭುವನಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸ್ತಿದ್ದಾರೆ. ಕೈವ ಚಿತ್ರಕ್ಕೆ 1983 ಅನ್ನೋ ಟ್ಯಾಗ್ ಲೈನ್‌ ಕೂಡ ಇದೆ. ಹಾಗಾದರೆ, ಈ ಸಿನಿಮಾದಲ್ಲಿ ರೆಟ್ರೋ ಕಾಲದ ಕಥೆ ಇರಲಿದೆ ಎನ್ನುತ್ತಿದ್ದಾರೆ ಫ್ಯಾ‌ನ್ಸ್.

ಕೈವ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ತಿಗಳರ ಪೇಟೆಯ ಸುತ್ತಮುತ್ತ ಮಾಡಲಾಗಿದೆ. ಈಗಾಗಲೇ ನಿರ್ದೇಶಕರು ಹೇಳಿರುವಂತೆ ಕೈವ ಚಿತ್ರದ ಕಥೆಗೂ ಕರಗ ಉತ್ಸವಕ್ಕೂ ನಂಟಿದೆಯಂತೆ. ಬೆಂಗಳೂರಿನಲ್ಲಿಯೇ ಚಿತ್ರೀಕರಣ ಕಂಪ್ಲೀಟ್ ಮಾಡಲಾಗಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಕಾಂತಾರ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್​ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಶ್ವೇತ್ ಪ್ರಿಯಾ ನಾಯಕ್ ಈ ಸಿನಿಮಾಗೆ ಕ್ಯಾಮರಾವರ್ಕ್ ಮಾಡಿದ್ದಾರೆ. ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರವನ್ನು ಪ್ರೇಕ್ಷಕರ ಮುಂದೆ ಪ್ರಸೆಂಟ್ ಮಾಡಲಿದ್ದಾರೆ ನಿರ್ದೇಶಕ ಜಯತೀರ್ಥ. ಕೈವಾ ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆ ದಿನಾಂಕ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

ಇದನ್ನೂ ಓದಿ:ಆ್ಯಕ್ಷನ್ ಪ್ರಿನ್ಸ್ ಕೆಡಿ ಚಿತ್ರದ ಅಖಾಡದಲ್ಲಿ ಬಾಲಿವುಡ್ ಖಳನಾಯಕ

ABOUT THE AUTHOR

...view details