ಬೆಂಗಳೂರು : ಬೈರತಿ ಬಸವರಾಜ್ ಬೆಂಬಲಿತ ಕೆಆರ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಲಿಕೆ ಸದಸ್ಯರು ಪ್ರತ್ಯೇಕ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ.
ಮೇಯರ್ ಚುನಾವಣೆ: ಸದಸ್ಯರೊಟ್ಟಿಗೆ ಪ್ರತ್ಯೇಕ ಉಪಾಹಾರ ಸಭೆ ನಡೆಸಿದ ಬೈರತಿ ಬಸವರಾಜ್ - ಕೆಆರ್ ಪುರ ವಿಧಾನಸಭಾ ಕ್ಷೇತ್ರ
ಅನರ್ಹ ಶಾಸಕ ಬೈರತಿ ಬಸವರಾಜ್ ಬೆಂಬಲಿತ ಪಾಲಿಕೆ ಸದಸ್ಯರಾದ ಕೆಆರ್ ಪುರ ಕ್ಷೇತ್ರದ ಶ್ರೀಕಾಂತ್ ಗೌಡ, ಸುರೇಶ್, ಜಯಪ್ರಕಾಶ್ ಮತ್ತು ಎಸ್ ಜಿ ನಾಗರಾಜ್ ಪ್ರತ್ಯೇಕ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದ್ದಾರೆ.
ಅನರ್ಹ ಶಾಸಕ ಬೈರತಿ ಬಸವರಾಜ್ ಬೆಂಬಲಿತ ಪಾಲಿಕೆ ಸದಸ್ಯರಾದ ಕೆಆರ್ ಪುರ ಕ್ಷೇತ್ರದ ಶ್ರೀಕಾಂತ್ ಗೌಡ, ಸುರೇಶ್, ಜಯಪ್ರಕಾಶ್ ಮತ್ತು ಎಸ್ ಜಿ ನಾಗರಾಜ್, ಬೈರತಿ ಬಸವರಾಜ್ ಬಣದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಾಲಿಕೆ ಸದಸ್ಯರು ಇಂದಿನ ಮೇಯರ್ ಉಪಮೇಯರ್ ಆಯ್ಕೆ ಚುನಾವಣೆಯಲ್ಲಿ ಪಾಲ್ಗೊಳ್ಳೊದು ಬಹುತೇಕ ಅನುಮಾನವಾಗಿದೆ. ಹಾಜರಾದರೂ ಯಾರಿಗೆ ಮತ ಹಾಕಲಿದ್ದಾರೆಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಕಾಡುತ್ತಿದೆ.
ಕೆಆರ್ ಪುರ ಕ್ಷೇತ್ರದ ಕಾಂಗ್ರೆಸ್ನ ಐದು ಪಾಲಿಕೆ ಸದಸ್ಯರ ನಡೆ ಇನ್ನೂ ನಿಗೂಢವಾಗಿದ್ದು, ಇವ್ರು ಬಿಜೆಪಿಗೊ ಅಥವಾ ಕಾಂಗ್ರೆಸ್ ಯಾರಿಗೆ ಮತ ಹಾಕುತ್ತಾರೆ ಎನ್ನುವಂತಾಗಿದೆ.