ಬೆಂಗಳೂರು:ಸಿಎಂ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲಿರುವ ಸರ್ಕಾರಿ ನಿವಾದ ಕಾವೇರಿ ತೆರವು ಮಾಡಲು ಒಂದು ತಿಂಗಳು ಸಮಯಾವಕಾಶ ನೀಡುವಂತೆ ರಾಜ್ಯ ಸರ್ಕಾರದ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿಗೆ ಮಾಜಿ ಸಚಿವ ಕೆ. ಜೆ. ಜಾರ್ಜ್ ಪತ್ರ ಬರೆದಿದ್ದಾರೆ.
ಕಾವೇರಿ ನಿವಾಸ ಖಾಲಿ ಮಾಡಲು ತಿಂಗಳ ಸಮಯ ನೀಡಿ: ಜಾರ್ಜ್ ಪತ್ರ - karnataka political latest news
ಕೆ. ಜೆ. ಜಾರ್ಜ್ಗೆ ಹಂಚಿಕೆಯಾಗಿದ್ದ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಮಾಡುತ್ತಿದ್ದು, ಇದೀಗ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಕಾರಣ ಕಾವೇರಿ ನಿವಾಸ ತೆರವಿಗೆ ಸರ್ಕಾರ ಸೂಚನೆ ನೀಡಿದ್ದಕ್ಕೆ ಪ್ರತಿಯಾಗಿ ನಿವಾಸ ತೆರವಿಗೆ ಒಂದು ತಿಂಗಳ ಸಮಯ ಬೇಕು ಎಂದು ಜಾರ್ಜ್ ಪತ್ರ ಬರೆದಿದ್ದಾರೆ.
ಮೈತ್ರಿ ಸರ್ಕಾರದ ವೇಳೆ ಸಚಿವರಾಗಿದ್ದ ಕೆ. ಜೆ. ಜಾರ್ಜ್ಗೆ ಹಂಚಿಕೆಯಾಗಿದ್ದ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಮಾಡುತ್ತಿದ್ದು, ಇದೀಗ ಆ ನಿವಾಸ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಕಾರಣ ನಿವಾಸ ತೆರವಿಗೆ ಸರ್ಕಾರ ಸೂಚನೆ ನೀಡಿದೆ. ಪ್ರತಿಯಾಗಿ ನಿವಾಸ ತೆರವಿಗೆ ಒಂದು ತಿಂಗಳ ಸಮಯವಕಾಶ ನೀಡುವಂತೆ ಜಾರ್ಜ್ ಪತ್ರ ಬರೆದಿದ್ದಾರೆ.
ಹೈಗ್ರೌಂಡ್ಸ್ ವ್ಯಾಪ್ತಿಯ ಸರ್ಕಾರಿ ನಿವಾಸ ಕಾವೇರಿಯನ್ನು ಖಾಲಿ ಮಾಡುವಂತೆ ಕಳುಹಿಸಿದ್ದ ಪತ್ರ ಗಮನಕ್ಕೆ ಬಂದಿದೆ. ಆದರೆ ಅನಿವಾರ್ಯ ಕಾರಣಗಳಿಂದ ನಿವಾಸ ತೆರವು ಮಾಡಲು ತಕ್ಷಣ ಸಾಧ್ಯವಾಗುತ್ತಿಲ್ಲ. ಹಾಗಾಗಿ ಒಂದು ತಿಂಗಳು ಸಮಯಾವಕಾಶ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ.