ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈಗೆ ತೆರಳಿರುವ ಅತೃಪ್ತರ ಮನವೊಲಿಕೆಗೆ ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ನಾಳೆ ಮುಂಬೈ ಕಡೆ ಹೊರಡಲು ಸಿದ್ಧತೆ ನಡೆಸುತ್ತಿದ್ದಂತೆ ಬಿಜೆಪಿ ನಾಯಕರು ಇಂದೇ ಮುಂಬೈ ವಿಮಾನ ಏರಿದ್ದಾರೆ.
ಸರ್ಕಾರ ಉ(ರು)ಳಿಸಲು ಕಸರತ್ತು: ಡಿಕೆಶಿಗೂ ಮೊದಲೇ ಮುಂಬೈಗೆ ಹಾರಿದ ಅಶೋಕ್,ಬೋಪಯ್ಯ! - undefined
ಮಾಜಿ ಡಿಸಿಎಂ ಆರ್ ಅಶೋಕ್ ಮತ್ತು ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಸಂಜೆ 7.30 ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ. ಡಿಕೆಶಿ ಹೋಗುವ ಮೊದಲೇ ಅತೃಪ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ನಿರ್ಧಾರ ಬದಲಿಸದಂತೆ ಮನವಿ ಮಾಡಲಿದ್ದಾರೆ.

ಮುಂಬೈನ ರೆಸಾರ್ಟ್ನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರ ಮನವೊಲಿಸಿ ವಾಪಸ್ ಕರೆ ತರಲು ಜೆಡಿಎಸ್ನ ಶಿವಲಿಂಗೇಗೌಡ ಜೊತೆ ಡಿ.ಕೆ ಶಿವಕುಮಾರ್ ನಾಳೆ ಮುಂಬೈಗೆ ತೆರಳುತ್ತಿದ್ದಾರೆ. ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಚಿವ ಸ್ಥಾನ ಸೇರಿದಂತೆ ವಿವಿಧ ಭರವಸೆಗಳನ್ನು ನೀಡಿ ಅತೃಪ್ತರ ಮನವೊಲಿಕೆ ಮಾಡಲು ಹೊರಟಿದ್ದಾರೆ.
ಇದರ ಸುಳಿವು ಸಿಗುತ್ತಿದ್ದಂತೆ ಇಂದೇ ಬಿಜೆಪಿ ನಾಯಕರು ಮುಂಬೈಗೆ ತೆರಳಿದ್ದಾರೆ. ಮಾಜಿ ಡಿಸಿಎಂ ಆರ್ ಅಶೋಕ್ ಮತ್ತು ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ ಸಂಜೆ 7.30 ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ. ಡಿಕೆಶಿ ಹೋಗುವ ಮೊದಲೇ ಅತೃಪ್ತರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ನಿರ್ಧಾರ ಬದಲಿಸದಂತೆ ಮನವಿ ಮಾಡಲಿದ್ದಾರೆ. ಜೊತೆಗೆ ಮತ್ತೊಮ್ಮೆ ರಾಜೀನಾಮೆ ಪತ್ರ ಸಲ್ಲಿಸಲು ಬೆಂಗಳೂರಿಗೆ ಬರುತ್ತಿರುವವರೊಂದಿಗೆ ಮೊದಲೇ ಮಾತುಕತೆ ನಡೆಸಿ ಮೈತ್ರಿ ಸುಳಿಗೆ ಸಿಗದಂತೆ ಮುನ್ನೆಚ್ಚರಿಕೆ ವಹಿಸಲು ಸಕಲ ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.