ಕರ್ನಾಟಕ

karnataka

ETV Bharat / state

ಐಟಿ ದಾಳಿಗೊಳಗಾದ ಪರಮೇಶ್ವರ್​ಗೆ ಕೆ.ಸಿ.ವೇಣುಗೋಪಾಲ್ ಅಭಯ! - sadashiva nagara

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ‌ ಭೇಟಿಯಾದ ಕೆ.ಸಿ.ವೇಣುಗೋಪಾಲ್ ಐಟಿ ದಾಳಿ ಸಂಬಂಧ‌ ಮಾಹಿತಿ ಪಡೆದರು. ಡಾ.ಜಿ.ಪರಮೇಶ್ವರ್​ಗೆ ಧೈರ್ಯ ತುಂಬಿ ಯಾವುದಕ್ಕೂ ಎದೆಗುಂದಬೇಡಿ, ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಅಭಯ ನೀಡಿದರು.

kcv

By

Published : Oct 16, 2019, 3:46 AM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಐಟಿ ದಾಳಿಗೊಳಗಾಗಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನಿವಾಸಕ್ಕೆ‌ ಭೇಟಿ ನೀಡಿದರು.

ಬೆಂಗಳೂರಿನ ಸದಾಶಿವ ನಗರದ‌ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿ, ಐಟಿ ದಾಳಿ ಸಂಬಂಧ‌ ಮಾಹಿತಿ ಪಡೆದರು. ಕೆ.ಸಿ.ವೇಣುಗೋಪಾಲ್ ಉಪಚುನಾವಣೆ ಸಂಬಂಧ ಮಂಗಳವಾರ ದಿನಪೂರ್ತಿ ಸಭೆ ನಡೆಸಿದ ಬಳಿಕ ಸಂಜೆ ಪರಮೇಶ್ವರ್​ರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಐಟಿ ದಾಳಿ, ಪಿಎ ರಮೇಶ್ ಆತ್ಮಹತ್ಯೆ ಸಂಬಂಧ ಮಾಹಿತಿ ಪಡೆದರು‌‌. ಡಾ.ಜಿ.ಪರಮೇಶ್ವರ್​ಗೆ ಧೈರ್ಯ ತುಂಬಿದ ಕೆ.ಸಿ.ವೇಣುಗೋಪಾಲ್, ನೀವು ಯಾವುದಕ್ಕೂ ಎದೆಗುಂದಬೇಡಿ. ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಅಭಯ ನೀಡಿದರು.

ಸುಮಾರು ಅರ್ಧ ತಾಸುಗಳ‌ ಕಾಲ ಪರಮೇಶ್ವರ್ ನಿವಾಸದಲ್ಲಿದ್ದ ಕೆ.ಸಿ.ವೇಣುಗೋಪಾಲ್, ಮುಂದಿನ ನಡೆ, ಕಾನೂನು ಹೋರಾಟದ ಆಯ್ಕೆಗಳು, ಪಕ್ಷ ಬೆಂಬಲದ ಬಗ್ಗೆ ಚರ್ಚೆ ನಡೆಸಿದರು.

ABOUT THE AUTHOR

...view details