ಕರ್ನಾಟಕ

karnataka

ವಾಣಿ ವಿಲಾಸ್​ ಮತ್ತು ನಿಮ್ಹಾನ್ಸ್​ ಆಸ್ಪತ್ರೆಗೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ ನ್ಯಾ. ವೀರಪ್ಪ

By

Published : Dec 20, 2022, 11:00 PM IST

ರಾಜ್ಯದಲ್ಲಿ ಮನೋವಿಜ್ಞಾನ ಮತ್ತು ನರ ವಿಜ್ಞಾನ ತಜ್ಞರ ಕೊರತೆಯಿಂದ ಜನ ನಿಮ್ಹಾನ್ಸ್​ನ್ನು ಹೆಚ್ಚು ಅವಲಂಬಿಸಿದ್ದು, ಅಲ್ಲಿಗೆ ಬರುವ ಎಲ್ಲ ರೋಗಿಗಳನ್ನು ಸಮನಾಗಿ ಕಾಣಬೇಕು ಎಂದು ಹೈಕೋರ್ಟ್​ ನ್ಯಾಯಮೂರ್ತಿ ಬಿ ವೀರಪ್ಪ ತಿಳಿಸಿದ್ದಾರೆ.

Justice Veerappa inspected Nimhans Hospital
ವಾಣಿ ವಿಲಾಸ್​ ಮತ್ತು ನಿಮ್ಹಾನ್ಸ್​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನ್ಯಾ. ಬಿ ವೀರಪ್ಪ

ಬೆಂಗಳೂರು: ರಾಜ್ಯದಲ್ಲಿ ಮನೋವಿಜ್ಞಾನ ಮತ್ತು ನರ ವಿಜ್ಞಾನ ತಜ್ಞರ ಕೊರತೆಯಿಂದ ಜನ ನಿಮ್ಹಾನ್ಸ್​ನ್ನು ಹೆಚ್ಚು ಅವಲಂಬಿಸಿದ್ದಾರೆ. ಅಲ್ಲಿಗೆ ಬರುವ ಎಲ್ಲ ರೋಗಿಗಳನ್ನು ಸಮನಾಗಿ ಕಾಣಬೇಕು ಎಂದು ಹೈಕೋರ್ಟ್​ ನ್ಯಾಯಮೂರ್ತಿ ಬಿ ವೀರಪ್ಪ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ಕಾರ್ಯಕಾರಿ ಅಧ್ಯಕ್ಷರಾಗಿರುವ ಅವರು ಮಂಗಳವಾರ ಬೆಂಗಳೂರಿನ ವಾಣಿ ವಿಲಾಸ ಮತ್ತು ನಿಮ್ಹಾನ್ಸ್ ಆಸ್ಪತ್ರೆಗೆಳಿಗೆ ಭೇಟಿ ನೀಡಿ ನಾಗರಿಕರರಿಂದ ದೂರುಗಳನ್ನು ಆಲಿಸಿ ಮಾತನಾಡಿ, ನಿಮ್ಹಾನ್ಸ್​ನಲ್ಲಿ ಹೊರ ರೋಗಿಗಳ ನೀಡಲಾಗುವ ಟೋಕನ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕಿದೆ. ಎಲ್ಲಾ ರೋಗಿಗಳನ್ನು ಸಮಾನವಾಗಿ ಕಾಣಬೇಕು ಎಂದು ಸೂಚಿಸಿದರು.

ಪಾರ್ಶ್ವ ವಾಯು ಹಾಗೂ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ತುರ್ತು ಚಿಕಿತ್ಸೆ ನೀಡಲು ಪ್ರತಿ ಜಿಲ್ಲೆಯಲ್ಲಿ ಉಪ ಕೇಂದ್ರ (ಹಬ್ ಅಂಡ್ ಸ್ಪೋಕ್ ಮಾಡೆಲ್) ಆರಂಭಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ನಿಮ್ಹಾನ್ಸ್ ನಿರ್ದೇಶಕಿ ಡಾ ಪ್ರತಿಮಾ ಮೂರ್ತ ನ್ಯಾಯಮೂರ್ತಿಗಳಿಗೆ ವಿವರಿಸಿದರು.

ವಾಣಿ ವಿಲಾಸ ಆಸ್ಪತ್ರೆಯ ನಿರ್ವಹಣೆ ಬಗ್ಗೆ ಶ್ಲಾಘಿಸಿದ ನ್ಯಾಯಮೂರ್ತಿಗಳು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಿರುವುದರಿಂದ ಸಿಬ್ಬಂದಿಯನ್ನೂ ಹೆಚ್ಚಿಸಬೇಕಿದೆ, ತಾಯಿ ಎದೆ ಹಾಲು ಸಂಗ್ರಹಿಸಿ, ಅಗತ್ಯವಾದ ಹಸುಗೂಸುಗಳಿಗೆ ಅದನ್ನು ಪೂರೈಸುವುದಕ್ಕಾಗಿ ರೂಪಿಸಲಾಗಿರುವ ಸಮಗ್ರ ಸ್ತನ್ಯಪಾನ ನಿರ್ವಹಣಾ ಕೇಂದ್ರ ಅಮೃತಧಾರೆ ಬಗ್ಗೆ ನ್ಯಾಯಮೂರ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಕಿ ಡಾ ಸವಿತಾ ಅವರು ನ್ಯಾ. ವೀರಪ್ಪ ಮತ್ತು ಅವರ ತಂಡಕ್ಕೆ ಆಸ್ಪತ್ರೆಯಲ್ಲಿ ನಾಗರಿಕರಿಗೆ ಕಲ್ಪಿಸಿರುವ ಸೌಲಭ್ಯದ ಕುರಿತು ವಿವರಣೆ ನೀಡಿದರು, ಆಸ್ಪತ್ರೆಗಳ ಭೇಟಿಯ ಸಂದರ್ಭದಲ್ಲಿನ ವರದಿಯನ್ನು ಸರ್ಕಾರದ ಸಂಬಂಧಿತ ಇಲಾಖೆಗಳ ಅವಗಾಹನೆಗೆ ತರುವ ನಿಟ್ಟಿನಲ್ಲಿ ಪತ್ರ ಬರೆಯುವಂತೆ ಕೆಎಸ್ಎಲ್ಎಸ್ಎ ಸದಸ್ಯ ಕಾರ್ಯದರ್ಶಿಗೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು.

ಅಲ್ಲದೇ, ಕಾನೂನು ಸೇವಾ ಪ್ರಾಧಿಕಾರ ಕಾಯಿದೆ ಸೆಕ್ಷನ್ 22(ಎ)(ಬಿ)(ವಿ) ಅಡಿ ಜನರಿಗೆ ದಾವೆ ಪೂರ್ವ ರಾಜಿ ಮತ್ತು ಇತ್ಯರ್ಥದ ಕುರಿತು ಅರಿವು ಮೂಡಿಸಿದರು. ಈ ವೇಳೆ ಕೆಎಸ್ಎಲ್ಎಸ್ಎ ಸದಸ್ಯ ಕಾರ್ಯದರ್ಶಿ ಜೈಶಂಕರ್, ಉಪ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಸಾರ್ವಜನಿಕ ಸಂಪರ್ಕಾಧಿಕಾರಿ ವಿಗ್ನೇಶ್ ಕುಮಾರ್ ಭಾಗವಹಿಸಿದ್ದರು.

ಇದನ್ನೂ ಓದಿ:ಎಂಬಿಬಿಎಸ್ ಕೋರ್ಸ್​ಗೆ ಕ್ರೀಡಾ ಕೋಟಾ ಸೇರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ABOUT THE AUTHOR

...view details