ಕರ್ನಾಟಕ

karnataka

ETV Bharat / state

ನ್ಯಾಯಮೂರ್ತಿ ಶಿವರಾಜ್ ಪಾಟೀಲ್​​ಗೆ ಸನ್ಮಾನ.... ಗಣ್ಯರ ಗುಣಗಾನ - ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮ

ನ್ಯಾಯಮೂರ್ತಿ ಶಿವರಾಜ್ ಪಾಟೀಲ್​​ರಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಅವರನ್ನು ಅಭಿನಂದಿಸಿ, ಸನ್ಮಾನಿಸಿದ್ರು.

Shivaraj Patil was congratulate by his fans
ಶಿವರಾಜ್ ಪಾಟೀಲ್ ಅವರಿಗೆ ಸನ್ಮಾನ

By

Published : Jan 13, 2020, 8:08 AM IST

ಬೆಂಗಳೂರು: ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರಿಗೆ 80 ವರ್ಷ ತುಂಬಿದ ಸುಸಂದರ್ಭದಲ್ಲಿ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಅವರನ್ನು ಅಭಿನಂದಿಸಿ, ಸನ್ಮಾನಿಸಿದ್ರು.

ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ವೇಳೆ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರು ಬರೆದಿರುವ 'ಸಾರ್ಥಕ ಬದುಕು' ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಇನ್ನು ಅಭಿನಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್, ಸುತ್ತೂರು ಶ್ರೀ‌ ಉಪಸ್ಥಿತರಿದ್ದರು.

ಶಿವರಾಜ್ ಪಾಟೀಲ್ ಅವರಿಗೆ ಸನ್ಮಾನ

ಇದೇ ವೇಳೆ, ಮಾತನಾಡಿದ ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ, ನ್ಯಾಯಮೂರ್ತಿ ಶಿವರಾಜ ಪಾಟೀಲ್ ಅವರು ಜೀವನದಲ್ಲಿ ಘನ ಆದರ್ಶ ತತ್ತ್ವ ಗಳನ್ನು ಅಳವಡಿಸಿಕೊಂಡು ಬಂದವರು. ಅಲ್ಲದೇ ಪ್ರಾಮಾಣಿಕವಾಗಿ ಸಾರ್ಥಕ ಜೀವನ ನಡೆಸಿದ್ದಾರೆ. ಶಿವರಾಜ್ ಪಾಟೀಲ್ ಒಳ್ಳೆಯ ಮಾನವತವಾದಿ ಜೊತೆಗೆ ಅವರ ಆದರ್ಶ, ಜೀವನ ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.

ABOUT THE AUTHOR

...view details