ಬೆಂಗಳೂರು:ಕೊರೊನಾ ಅಬ್ಬರ ಜೋರಾಗಿದ್ದ ಕಾರಣ ರಾಜ್ಯದಲ್ಲಿ ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ಮುಂದೂಡಿಕೆಯಾಗಿದೆ. ಇದೀಗ ಜೂನ್ ಅಂತಿಮ ವಾರದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಜೂನ್ ಅಂತ್ಯದಲ್ಲಿ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಗೆ ಸಿದ್ಧತೆ: ಸಚಿವ ಎಸ್.ಸುರೇಶ್ ಕುಮಾರ್ - ಶಿಕ್ಷಣ ಸಚಿವ ಸುರೇಶ್ ಕುಮಾರ್
ಕೊರೊನಾ ವೈರಸ್ನಿಂದ ಮುಂದೂಡಿಕೆಯಾಗಿರುವ ಇಂಗ್ಲಿಷ್ ಪರೀಕ್ಷೆ ಜೂನ್ ಕೊನೆಯ ವಾರದಲ್ಲಿ ನಡೆಸುವ ಚಿಂತನೆ ಇದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡದ್ದಾರೆ.
june last weak PUC Exam: suresh kumar
ವಿದ್ಯಾರ್ಥಿಗಳ ಗಮನಕ್ಕೆ... ಜೂನ್ 3ನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸರ್ಕಾರದ ಚಿಂತನೆ
ಜೂನ್ 3ನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಿದ್ಧತೆಯ ನಡುವೆಯೇ, ಪಿಯು ಪರೀಕ್ಷೆ ನಡೆಸುವ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ. ಆಂಗ್ಲ ಭಾಷಾ ಪರೀಕ್ಷೆ ನಡೆಸುವುದು ಬಾಕಿ ಇದೆ. ಈ ಕುರಿತಂತೆ ಪೂರ್ವ ಸಿದ್ಧತಾ ಕಾರ್ಯಗಳನ್ನು ಇಲಾಖೆ ಪ್ರಾರಂಭಿಸಿದೆ. ಜೂನ್ ತಿಂಗಳಿನಲ್ಲೇ ಸಾಧ್ಯವಾದಷ್ಟು ಮಟ್ಟಿಗೆ ಪರೀಕ್ಷೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.