ಕರ್ನಾಟಕ

karnataka

ETV Bharat / state

ಬ್ರೈನ್ ಟ್ಯೂಮರ್ ದಿನ: ರೋಗ ಲಕ್ಷಣ ತಿಳಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ - Predictions of brain tumor

ಬ್ರೈನ್ ಟ್ಯೂಮರ್‌ಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ಪ್ರಾರಂಭಿಕ ರೋಗ ಪರೀಕ್ಷೆ ಮಾಡುವುದು ಬಹಳ ಮುಖ್ಯ. ಆರಂಭಿಕ ಲಕ್ಷಣ ಗೋಚರಿಸಿದಾಗಲೇ ವೈದ್ಯರನ್ನು ಸಂಪರ್ಕಿಸಿದರೆ ಜೀವ ಹಾನಿ ತಡೆಯಬಹುದು.

Etv Bharat
ಜೂ.8 ಬ್ರೈನ್ ಟ್ಯೂಮರ್ ದಿನ: ರೋಗ ಬಂದ ಮೇಲಲ್ಲಾ, ಲಕ್ಷಣ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ -ನಾಳೆಗೆ ಎಂಬರ್ಗೋ

By

Published : Jun 8, 2023, 6:00 AM IST

ಬೆಂಗಳೂರು : ಬ್ರೈನ್ ಟ್ಯೂಮರ್ ಮೆದುಳಿನಲ್ಲಿ ಅಥವಾ ಸುತ್ತಮುತ್ತಲಿನ ಜೀವಕೋಶಗಳಲ್ಲಿ ಅಸಹಜ ಜೀವಕೋಶಗಳ ಬೆಳವಣಿಗೆಯಿಂದ ಎದುರಾಗುವ ಸಮಸ್ಯೆಯಾಗಿದೆ. ಇದರ ಆರಂಭಿಕ ಲಕ್ಷಣ ಗೋಚರಿಸಿದಾಗಲೇ ವೈದ್ಯರನ್ನು ಸಂಪರ್ಕಿಸಿದರೆ ಜೀವಹಾನಿ ತಡೆಯಬಹುದು. ಬ್ರೇನ್ ಟ್ಯೂಮರ್ ನಲ್ಲಿ ಎರಡು ವಿಧ. ಮೊದಲಿನದು ಕ್ಯಾನ್ಸರ್ ರಹಿತವಾದ ಸೌಮ್ಯ ಸಮಸ್ಯೆ. ಎರಡನೇಯದು ಕ್ಯಾನ್ಸರ್ ಉಂಟು ಮಾಡಬಲ್ಲ ಉಗ್ರ ಸಮಸ್ಯೆಯಾಗಿದೆ.

ಮೆದುಳಿನ ಟ್ಯೂಮರ್​​ಗಳ ನಿರ್ದಿಷ್ಟ ಕಾರಣಗಳು ಬಹಳಷ್ಟು ವೇಳೆ ಅಗೋಚರವಾಗಿರುತ್ತವೆ. ರೇಡಿಯೇಷನ್​ಗೆ ಒಳಗಾಗುವುದು, ಕೌಟುಂಬಿಕ ಇತಿಹಾಸ ಮತ್ತು ವಂಶವಾಹಿ ರೋಗಲಕ್ಷಣಗಳು ಇದರ ಬೆಳವಣಿಗೆಯನ್ನು ಹೆಚ್ಚಿಸಬಹುದು ಎನ್ನುತ್ತದೆ ವೈದ್ಯಲೋಕ. ಪ್ರಾರಂಭಿಕ ಹಂತದಲ್ಲಿ ಬ್ರೈನ್ ಟ್ಯೂಮರ್ ಗಳನ್ನು ಕಂಡುಕೊಳ್ಳುವುದು ಚಿಕಿತ್ಸೆಯ ಯಶಸ್ವಿ ಫಲಿತಾಂಶಗಳಿಗೆ ಬಹಳ ಮುಖ್ಯ. ಮೆದುಳು ದೇಹದ ಹಲವಾರು ಕಾರ್ಯಗಳನ್ನು ನಿಯಂತ್ರಿಸುವ ಜವಾಬ್ದಾರಿ ಹೊಂದಿರುತ್ತದೆ, ಆದ್ದರಿಂದ ಅಸಹಜ ಬೆಳವಣಿಗೆಯು ಈ ಕಾರ್ಯಗಳಿಗೆ ಅಡೆ ತಡೆ ಉಂಟು ಮಾಡಬಹುದು. ಪ್ರಾರಂಭಿಕ ಮುನ್ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಮತ್ತು ಸಂಭವನೀಯ ಸಂಕೀರ್ಣತೆಗಳನ್ನು ತಪ್ಪಿಸಲು ಮತ್ತು ರೋಗದ ಮುನ್ನರಿವು ನೀಡುವಲ್ಲಿ ಪ್ರಾಮಾಣಿಕವಾಗಿ ವೈದ್ಯರ ಮಾರ್ಗದರ್ಶನ ಪಡೆಯುವುದು ಅಗತ್ಯ.

ರೋಗದ ಮುನ್ಸೂಚನೆಗಳು :

ಪದೇ ಪದೇ ತಲೆನೋವುಗಳು :ನೀವು ಸತತವಾಗಿ ಅಥವಾ ತೀವ್ರವಾದ ತಲೆನೋವುಗಳಿಂದ ಬಳಲುತ್ತಿದ್ದರೆ ಮುಖ್ಯವಾಗಿ ಇತರೆ ರೋಗದ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ ನೀವು ಆರೋಗ್ಯ ಸೇವಾ ವೃತ್ತಿಪರರಿಂದ ಪರೀಕ್ಷೆಗೆ ಒಳಗಾಗುವುದು ಬಹಳ ಮುಖ್ಯ.

ಮೂರ್ಛೆ :ಮೂರ್ಛೆರೋಗದ ಇತಿಹಾಸ ಹೊಂದಿರದವರು, ಇತರೆ ಗೊತ್ತಿರುವ ಕಾರಣಗಳಿಗೆ ಮೂರ್ಛೆ ಬೀಳುವುದನ್ನು
ನಿರ್ಲಕ್ಷಿಸುವಂತಿಲ್ಲ ಮತ್ತು ಪ್ರಾಮಾಣಿಕವಾಗಿ ವೈದ್ಯಕೀಯ ಗಮನ ನೀಡಬೇಕು.

ನರ ಸಂಬಂಧಿ ಕೊರತೆ :ದೃಷ್ಟಿ, ಮಾತು, ಸಹಯೋಗ ಅಥವಾ ಸ್ಮರಣೆಯಲ್ಲಿ ತಕ್ಷಣದ ಅಥವಾ ಪ್ರಗತಿಯಾಗುವ ಬದಲಾವಣೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ವೈದ್ಯರಿಂದ ಪರೀಕ್ಷೆಗೆ ಒಳಪಡಿಸಬೇಕು.

ವಾಕರಿಕೆ ಮತ್ತು ವಾಂತಿ :ನೀವು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಪದೇ ಪದೇ ವಾಕರಿಕೆ ಅಥವಾ ವಾಂತಿ ಲಕ್ಷಣವನ್ನು ಅನುಭವಿಸುತ್ತಿದ್ದರೆ ಅದು ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾದ ಸಮಸ್ಯೆ ಇದ್ದೇ ಇರುತ್ತದೆ.

ವರ್ತನೆ ಅಥವಾ ಅರಿವಿನ ಬದಲಾವಣೆ :ವರ್ತನೆ, ವ್ಯಕ್ತಿತ್ವ ಅಥವಾ ಅರಿವಿನ ಕಾರ್ಯದಲ್ಲಿ ಗಮನಿಸುವಂತಹ ಬದಲಾವಣೆಗಳು ಕಂಡುಬಂದಲ್ಲಿ ಅವು ಮೆದುಳಿನ ಟ್ಯೂಮರ್ ಗೆ ಸಂಬಂಧಿಸಿರಬಹುದಾಗಿದ್ದು ವೈದ್ಯರಿಂದ ಪರೀಕ್ಷೆಗೆ ಒಳಪಡಬೇಕು.

ಸಾಧ್ಯತೆ ಅರ್ಥ ಮಾಡಿಕೊಳ್ಳುವುದು :ಬ್ರೈನ್ ಟ್ಯೂಮರ್ ಗಳು ಯಾವುದೇ ವಯಸ್ಸಿನಲ್ಲಿ ಉಂಟಾಗಬಹುದು ಆದ್ದರಿಂದ ಕೆಲ ನಿರ್ದಿಷ್ಟ ರಿಸ್ಕ್ ಅಂಶಗಳಿಂದ ಕೆಲ ವ್ಯಕ್ತಿಗಳು ಇದಕ್ಕೆ ಒಳಗಾಗಬಹುದು. ಇವುಗಳಲ್ಲಿ ಪ್ರಮುಖವಾಗಿ..

ಕೌಟುಂಬಿಕ ಇತಿಹಾಸ: ಬ್ರೈನ್ ಟ್ಯೂಮರ್ ಗಳು ಕುಟುಂಬ ಇತಿಹಾಸ ಹೊಂದಿರುವವರಿಗೆ ಹೆಚ್ಚಿನ ರಿಸ್ಕ್ ಇರುತ್ತದೆ ಮತ್ತು ಅವರು ಈ ಸಂಭವನೀಯರ ರೋಗದ ಕುರಿತು ಅರಿವನ್ನು ಹೊಂದಿರಬೇಕು.

ಆನುವಂಶಿಕ ಲಕ್ಷಣ: ಕೆಲ ಆನುವಂಶಿಕ ಪರಿಸ್ಥಿತಿಗಳಾದ ನ್ಯೂರೊಫೈಬ್ರೊಮಟೋಸಿಸ್ ಮತ್ತು ಲೈ-ಫ್ರಾವ್ ಮೆನಿ ಸಿಂಡ್ರೋಮ್ ಬ್ರೈನ್ ಟ್ಯೂಮರ್ ಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಹೆಚ್ಚಿನ ರಿಸ್ಕ್ ಹೊಂದಿರುತ್ತಾರೆ. ನಿಮಗೆ ಈ ತೊಂದರೆಗಳಿದ್ದರೆ ಎಚ್ಚರಿಕೆಯಿಂದಿರಿ ಮತ್ತು ನಿಮ್ಮ ವೈದ್ಯರೊಂದಿಗೆ ಯಾವುದೇ ಸಮಸ್ಯೆಗಳನ್ನೂ ಚರ್ಚಿಸಿ.

ರೇಡಿಯೇಷನ್ ಗೆ ಒಳಗಾಗುವುದು :ಜನರು ಮುಖ್ಯವಾಗಿ ತಲೆ, ಮುಖದ ರೇಡಿಯೇಷನ್ ಥೆರಪಿಗೆ ಒಳಗಾದಾಗ ಬ್ರೈನ್ ಟ್ಯೂಮರ್ ಗಳನ್ನು ಬೆಳೆಸಿಕೊಳ್ಳುವ ಹೆಚ್ಚಿನ ರಿಸ್ಕ್ ಇರುತ್ತದೆ. ನಿಮಗೆ ರೇಡಿಯೇಷನ್ ಚಿಕಿತ್ಸೆಯ ಇತಿಹಾಸ ಹೊಂದಿದ್ದರೆ ನಿಮ್ಮ ಆರೋಗ್ಯಸೇವಾ ಪೂರೈಕೆದಾರರೊಂದಿಗೆ ನಿಯಮಿತ ಪರೀಕ್ಷೆ ಮತ್ತು ಸಂವಹನ ಅತ್ಯಂತ ಅಗತ್ಯ.

ವಯಸ್ಸು ಮತ್ತು ಲಿಂಗ: ಕೆಲ ಬಗೆಯ ಅಂದರೆ ಗಿಲೋಮಾಸ್ ನಂತಹ ಬ್ರೈನ್ ಟ್ಯೂಮರ್ ಗಳು ವೃದ್ಧರಲ್ಲಿ ಹೆಚ್ಚು ಸಂಭವಿಸುತ್ತವೆ. ಹೆಚ್ಚುವರಿಯಾಗಿ ಮೆನಿಂಜಿಯೊಮಾಸ್ ನಂತಹ ಬ್ರೈನ್ ಟ್ಯೂಮರ್ ಗಳು ಸ್ತ್ರೀಯರಲ್ಲಿ ಸಾಮಾನ್ಯವಾಗಿ ಕಂಡುಬಂರುತ್ತದೆ. ಈ ಸಹಯೋಗಗಳ ಕುರಿತು ಅರಿವನ್ನು ಹೊಂದಿರುವುದು ವ್ಯಕ್ತಿಗಳು ಮತ್ತು ಆರೋಗ್ಯ ಸೇವಾ ಪೂರೈಕೆದಾರರಿಗೆ ಸಂಭವನೀಯ ರಿಸ್ಕ್ ಗಳನ್ನು ಗುರುತಿಸಲು
ನೆರವಾಗುತ್ತದೆ.

ವೈದ್ಯರು ಈ ಬಗ್ಗೆ ಏನೆನ್ನುತ್ತಾರೆ ? :ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಮಜ಼ಂದಾರ್ ಷಾ ಮೆಡಿಕಲ್ ಸೆಂಟರ್ ನ ನ್ಯೂರೋ ಸರ್ಜರಿಯ ಸೀನಿಯರ್ ಕನ್ಸಲ್ಟೆಂಟ್, ಡಾ. ಕೋಮಲ್ ಪ್ರಸಾದ್, “ ನಮ್ಮ ದೇಹಗಳು ರೋಗದ ಮುನ್ಸೂಚನೆಗಳನ್ನು ನೀಡಿದಾಗ ನಾವು ಎಚ್ಚರಿಕೆಯಿಂದ ಇರಬೇಕು ಮತ್ತು ಗಮನ ನೀಡಬೇಕು. ನೀವು ಮೇಲೆ ಹೇಳಲಾದ ಯಾವುದೇ ಸೂಚನೆಗಳನ್ನು ಅನುಭವಿಸುತ್ತಿದ್ದರೆ ಅಥವಾ ಸಂಭವನೀಯತೆಯ ವಿಭಾಗಗಳಲ್ಲಿದ್ದರೆ ವೈದ್ಯರ ಸಲಹೆ ಪಡೆಯುವುದು ಹಾಗೂ ಆರೋಗ್ಯಸೇವಾ ವೃತ್ತಿಪರರೊಂದಿಗೆ ನಿಮ್ಮ ಕಾಳಜಿಗಳನ್ನು ಚರ್ಚಿಸುವುದು ಬಹಳ ಮುಖ್ಯ.

ನೆನಪಿನಲ್ಲಿಟ್ಟುಕೊಳ್ಳಿ, ಪ್ರಾರಂಭಿಕ ರೋಗಪತ್ತೆಯು ಚಿಕಿತ್ಸೆಯ ಫಲಿತಾಂಶಗಳಿಗೆ ಮತ್ತು ಒಟ್ಟಾರೆ ರೋಗಗುಣಪಡಿಸುವಿಕೆಗೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಬ್ರೈನ್ ಟ್ಯೂಮರ್ ಗಳ ಕುರಿತು ಅರಿವನ್ನು ವಿಸ್ತರಿಸುವುದು ಮತ್ತು ಪ್ರಾರಂಭಿಕ ರೋಗಪರೀಕ್ಷೆ ಮಾಡುವುದು ಬಹಳ ಮುಖ್ಯ. ರೋಗ ಲಕ್ಷಣಗಳನ್ನು ಗುರುತಿಸುವುದು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವುದರಿಂದ ನಾವು ಜೀವಗಳನ್ನು ಉಳಿಸಬಹುದು ಮತ್ತು ಈ ಪರಿಸ್ಥಿತಿಯಿಂದ ಬಾಧಿತರ ಉತ್ತಮ ಫಲಿತಾಂಶಗಳನ್ನು ನೀಡಬಹುದು” ಎನ್ನುತ್ತಾರೆ.

ಇದನ್ನೂ ಓದಿ :ಮಕ್ಕಳೊಂದಿಗಿನ ನಿಮ್ಮ ಮಾತು ಅವರ ಮಿದುಳಿನ ಅಭಿವೃದ್ಧಿ ಹೆಚ್ಚಿಸುತ್ತದೆ: ಅಧ್ಯಯನ ವರದಿ

ABOUT THE AUTHOR

...view details