ಬೆಂಗಳೂರು :ಜೂನ್ 30 ಹಾಗೂ ಜುಲೈ 1ರಂದು ನಗರದ ಬಹುತೇಕ ಕಡೆ ಕಾವೇರಿ ನೀರು ಪೂರೈಕೆ ಬಂದ್ ಮಾಡಿ ಪ್ರಮುಖ ರಿಪೇರಿ ಕೆಲಸ ಕಾರ್ಯ ಕೈಗೊಳ್ಳಲಿರುವುದಾಗಿ ಬಿಡಬ್ಲ್ಯೂಎಸ್‌ಎಸ್‌ಬಿ ತಿಳಿಸಿದೆ. ಕಾವೇರಿ ಭವನದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕೇಂದ್ರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಿಂದ ಪ್ರಕಟಣೆ ಹೊರಬಿದ್ದಿದೆ. ಜೂನ್ 30 ಹಾಗೂ ಜುಲೈ 1ರಂದು ಕಾವೇರಿ 4ನೇ ಹಂತದ 1ನೇ ಘಟ್ಟದ ಪಂಪ್ ಹೌಸ್‌ಗಳನ್ನು ಸ್ಥಗಿತಗೊಳಿಸುತ್ತಿರುವುದರಿಂದ ನಗರದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಜಲಮಂಡಳಿ ವ್ಯಾಪ್ತಿಯ 950 ಮಿ.ಮೀ ವ್ಯಾಸದ 5.6 ಬೈನೇಜ್‌ನ ನೀರು ಸರಬರಾಜು ಕೊಳವೆ ಮಾರ್ಗದ ಮುಖ್ಯ ಮಾರ್ಗದಲ್ಲಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳಂದು ನೀರು ಸೋರುವಿಕೆಯನ್ನು ತಡೆಗಟ್ಟುವ ಕಾಮಗಾರಿಯನ್ನು ಹಾಗೂ ಟಿ.ಕೆ ಹಳ್ಳ, ಹಾರೋಹಳ್ಳಿ ಹಾಗೂ ತಾತಗುಣಿ ಪಂಪ್ ಹೌಸ್‌ಗಳಲ್ಲಿ ಇತರ ವಿದ್ಯುತ್ ಹಾಗೂ ಮೆಕ್ಯಾನಿಕಲ್ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ನಗರದ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಗರದ ಗಣಪತಿ ನಗರ, ಎಂಇಐ ಕಾಲೋನಿ, ಲಕ್ಷ್ಮಿದೇವಿನಗರ, ಐಹೆಚ್‌ಸಿಎಸ್ ಬಡಾವಣೆ, ಹ್ಯಾಪಿ ವ್ಯಾಲಿ ಬಡಾವಣಿಯ ಕೆಲವು ಭಾಗಗಳು ಮತ್ತು ಉತ್ತರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕೋರಮಂಗಲ 1ನೇ, 4ನೇ ಬ್ಲಾಕ್, 4ನೇ ಸಿ ಬ್ಲಾಕ್, ಜೆ ಬ್ಲಾಕ್, ಮಿಲಿಟರಿ ಕ್ಯಾಂಪಸ್, ಎಸಿಎಸ್ ಸೆಂಟರ್, ಸಿದ್ಧಾರ್ಥ ಕಾಲೋನಿ,ವೆಂಕಟಪುರ, ಟೀಚರ್ ಕಾಲೋನಿ, ಜಕ್ಕಸಂದ್ರ, ಎಸ್‌ಟಿಬೆಡ್ ಪ್ರದೇಶ, ಜಯನಗರ 4ನೇ ಬ್ಲಾಕ್, ಅರಸುಕಾಲೋನಿ, ತಿಲಕ್‌ನಗರ, ಎನ್‌ಇಐ ಬಡಾವಣೆ, ಈಸ್ಟ್ ಎಂಡ್ ಮುಖ್ಯರಸ್ತೆಗಳು, ಕೃಷ್ಣಪ್ಪ ಗಾರ್ಡನ್.