ಕರ್ನಾಟಕ

karnataka

ETV Bharat / state

ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ಪ್ರಕರಣ: ನಿರ್ವಾಹಕಿ ಸೇರಿ ಐವರು ಮಹಿಳೆಯರಿಗೆ ನ್ಯಾಯಾಂಗ ಬಂಧನ - ಐವರು ಮಹಿಳೆಯರಿಗೆ ನ್ಯಾಯಾಂಗ ಬಂಧನ

ಕರ್ತವ್ಯನಿರತ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ಪ್ರಕರಣದಲ್ಲಿ ಐವರು ಮಹಿಳೆಯರಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ.

Judicial custody of five women in BMTC Driver Assault Case
ಬಿಎಂಟಿಸಿ ಚಾಲಕ ಮೇಲೆ ಹಲ್ಲೆ ಪ್ರಕರಣ

By

Published : Apr 13, 2021, 6:26 PM IST

ಬೆಂಗಳೂರು: ನೆಲಮಂಗಲದಲ್ಲಿ ಬಿಎಂಟಿಸಿ ಬಸ್ ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಾಹಕಿ ಸೇರಿ ಐದು ಜನ ಮಹಿಳೆಯರನ್ನು ಬಂಧಿಸಲಾಗಿದೆ.

‌ನೆಲಮಂಗಲದ ಅರಿಶಿನಕುಂಟೆ ಬಳಿ ಬಸ್ ತಡೆದು ಈ ಮಹಿಳೆಯರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಚಾಲಕ ಗಿರೀಶ್ ಮತ್ತು ನಿರ್ವಾಹಕ ಚನ್ನಕೇಶವ ಮೇಲೆ ಹಲ್ಲೆ ನಡೆಸಲಾಗಿತ್ತು.‌ ಜೊತೆಗೆ ಕರ್ತವ್ಯನಿರತ ಪಿಸಿ ಮಹದೇವಯ್ಯ ಮೇಲೂ ಹಲ್ಲೆ ನಡೆಸಿರುವ ಆರೋಪದಡಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ : ಕರ್ತವ್ಯಕ್ಕೆ ಹಾಜರಾದ ಬಿಎಂಟಿಸಿ ಬಸ್ ಚಾಲಕನ ಮೇಲೆ ಮಹಿಳೆಯರಿಂದ ಹಲ್ಲೆ

‌ಪೀಣ್ಯ ಡಿಪೋ ನಿರ್ವಾಹಕಿ ಕುಸುಮ, ಸವಿತಾ, ಗೀತಾ, ಅನ್ನಪೂರ್ಣ, ಸುನಿತಾ ಎಂಬುವರ ಮೇಲೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಮಹಿಳೆಯರನ್ನು ನೆಲಮಂಗಲ ಜೆಎಂಎಫ್​ಸಿ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಏಪ್ರಿಲ್ 24ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details