ಕರ್ನಾಟಕ

karnataka

By

Published : Jan 12, 2021, 10:40 PM IST

ETV Bharat / state

ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿರುವ ನ್ಯಾಯಾಂಗ ನಿಂದನೆ ಸೆಕ್ಷನ್ 2(ಸಿ)(ಐ) ರದ್ದು ಕೋರಿ ಅರ್ಜಿ: ಕೇಂದ್ರಕ್ಕೆ ನೋಟಿಸ್

ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್ 2 (ಸಿ) (ಐ) ರದ್ದುಪಡಿಸಲು ಕೋರಿ ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್, ಎನ್.ರಾಮ್, ಅರುಣ್ ಶೌರಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಇಂದು ನಡೆಸಿತು. ಈ ಸಂಬಂಧ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.

ಹೈಕೋರ್ಟ್ ನೋಟಿಸ್
ಹೈಕೋರ್ಟ್

ಬೆಂಗಳೂರು: ‘ಮುಕ್ತ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಕ್ಕನ್ನು ಉಲ್ಲಂಘಿಸುತ್ತಿರುವ ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್ 2 (ಸಿ) (ಐ) ರದ್ದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್ 2 (ಸಿ) (ಐ) ರದ್ದುಪಡಿಸಲು ಕೋರಿ ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್, ಎನ್.ರಾಮ್, ಅರುಣ್ ಶೌರಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು. ಅಲ್ಲದೇ ಅರ್ಜಿಯಲ್ಲಿ ಕಾಯ್ದೆಯ ಸೆಕ್ಷನ್ 2 (ಸಿ) (ಐ) ಇದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವುದರಿಂದ ಅಟಾರ್ನಿ ಜನರಲ್ ಆಫ್ ಇಂಡಿಯಾ ಅವರಿಗೂ ನೋಟಿಸ್ ಜಾರಿ ಮಾಡಲು ಆದೇಶಿಸಿ ವಿಚಾರಣೆಯನ್ನು ಫೆಬ್ರವರಿ 22ಕ್ಕೆ ಮುಂದೂಡಿತು.

ಓದಿ:ವಿದೇಶಿ ಪ್ರಭಾವಕ್ಕೆ ಒಳಗಾಗಿ ಕಾಯ್ದೆ ರೂಪಿಸಿದ್ದಾರೆ ಎಂದ ಎನ್​​ಹೆಚ್ಎಐ: ಗರಂ ಆದ ಹೈಕೋರ್ಟ್​

ಅರ್ಜಿದಾರರ ಕೋರಿಕೆ:ನ್ಯಾಯಾಂಗ ನಿಂದನೆ ಕಾಯ್ದೆ-1971 ಸೆಕ್ಷನ್ 2 (ಸಿ) (ಐ) ಸಂವಿಧಾನದ ಕಲಂ 19 (1)ರಲ್ಲಿ ಖಾತರಿಪಡಿಸಿದ ಮುಕ್ತ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಅಲ್ಲದೇ ಈ ಸೆಕ್ಷನ್ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಶೈತ್ಯಗೊಳಿಸುತ್ತಿದೆ. ನ್ಯಾಯಾಲಯದ ಘನತೆ ಕುಗ್ಗಿಸುವ ಅಥವಾ ನ್ಯಾಯಾಲಯವನ್ನು ದೂಷಣೆಗ ಒಳಪಡಿಸುವುದನ್ನು ಸಂವಿಧಾನದ ಕಲಂ 19 (2) ವ್ಯಾಪ್ತಿಯಲ್ಲಿ ಪರಿಗಣಿಸುವಂತಿಲ್ಲ. ನ್ಯಾಯಾಲಯದ ದೂಷಣೆ ಎನ್ನುವುದು ವಸಾಹತುಶಾಹಿ ಊಹೆಗಳ ಮೂಲದಿಂದ ಬಂದಿದ್ದು, ಇದಕ್ಕೆ ಪ್ರಜಾಪ್ರಭುತ್ವದ ಸಂವಿಧಾನದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹಾಗೆಯೇ ನ್ಯಾಯಾಂಗ ನಿಂದನೆ ಕಾಯ್ದೆ-1971ರ ಸೆಕ್ಷನ್ 2 (ಸಿ) (ಐ) ಸಂವಿಧಾನದ ಕಲಂ 19 ಮತ್ತು 14ರ ಉಲ್ಲಂಘನೆ ಮಾಡುವುದರಿಂದ ಅದನ್ನು ಅಸಂವಿಧಾನಿಕ ಎಂದು ಘೋಷಿಸಬೇಕು. ಕ್ರಿಮಿನಲ್ ನ್ಯಾಯಾಂಗ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ನಿಯಮ ಮತ್ತು ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ABOUT THE AUTHOR

...view details