ಕರ್ನಾಟಕ

karnataka

ETV Bharat / state

ಚೀನಾದಿಂದಲೇ ಕೋವಿಡ್-19 ಹೊತ್ತು ತಂದಿದ್ದನಾ ಜುಬಿಲಂಟ್ ಕಾರ್ಖಾನೆ ಮೊದಲ ಸೋಂಕಿತ? - Jubilant factory

ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ ಮೊದಲ‌ ಸೋಂಕಿತನ ಟ್ರಾವೆಲ್ ಹಿಸ್ಟರಿ ಚೀನಾದಿಂದ ಪ್ರಾರಂಭವಾಗಿ ಕಾರ್ಖಾನೆಯ ಕ್ವಾಲಿಟಿ ಅಶ್ಯೂರೆನ್ಸ್ ಡಿಪಾರ್ಟ್ಮೆಂಟ್​ನ ಸುಮಾರು 17-18 ಜನರಿಗೆ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಆಗಿರುವುದನ್ನು ಪತ್ತೆ ಹಚ್ಚಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Jubilant factory
ಗೃಹ ಸಚಿವ ಬಸವರಾಜ ಬೊಮ್ಮಾಯಿ

By

Published : Apr 16, 2020, 4:18 PM IST

ಬೆಂಗಳೂರು: ಮೈಸೂರಿಗೆ ಕೊರೊನಾ ಸೋಂಕು ಪಸರಿಸಲು ಕಾರಣರಾದ ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ ಮೊದಲ‌ ಸೋಂಕಿತ ವ್ಯಕ್ತಿ ಚೀನಾಗೆ ಹೋಗಿ ಬಂದಿರುವ ಸುಳಿವು ರಾಜ್ಯ ಸರ್ಕಾರಕ್ಕೆ ಲಭ್ಯವಾಗಿದ್ದು, ಈ ಇದರ ಆಧಾರದಲ್ಲೇ ಮಾಹಿತಿ ಕಲೆಹಾಕುತ್ತಿದೆ.

ಜುಬಿಲಂಟ್ ಕಾರ್ಖಾನೆ ವಿಷಯ ಕುರಿತು ಮಾಹಿತಿ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆ ವ್ಯಕ್ತಿ ಚೀನಾಗೆ ಹೋಗಿ ಬಂದಿದ್ದರಿಂದ ಸಂಪರ್ಕ ಆಗಿರುವುದು ಪ್ರೈಮರಿ‌ ಕಾಂಟ್ಯಾಕ್ಟ್​ನಿಂದ ಗೊತ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿಯಿಂದ ಸೋಂಕು ಬಂದಿರುವುದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಆ ಟ್ರ್ಯಾಕ್​ನಲ್ಲೇ ನಾವು ಕೆಲಸ ಮಾಡುತ್ತಿದ್ದೇವೆ ಸರ್ಕಾರದ ಬಳಿ ಕೆಲವು ಮಾಹಿತಿಗಳಿವೆ, ಎಲ್ಲವನ್ನೂ ಬಹಿರಂಗ ಮಾಡಲು ಆಗುವುದಿಲ್ಲ ತಿಳಿಸಿದ್ದಾರೆ.

ನಂಜನಗೂಡಿನ ಜುಬಿಲಂಟ್ ಕಾರ್ಖಾನೆಯ ಮೊದಲ‌ ಸೋಂಕಿತನ ಟ್ರಾವೆಲ್ ಹಿಸ್ಟರಿ ಚೀನಾದಿಂದ ಪ್ರಾರಂಭವಾಗಿ ಕಾರ್ಖಾನೆಯ ಕ್ವಾಲಿಟಿ ಅಶ್ಯೂರೆನ್ಸ್ ಡಿಪಾರ್ಟ್ಮೆಂಟ್​ನ ಸುಮಾರು 17-18 ಜನರಿಗೆ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಆಗಿರುವುದನ್ನು ಪತ್ತೆ ಹಚ್ಚಿದ್ದೇವೆ, ಎರಡು ಮೂರು ಜಿಲ್ಲೆಗಳಲ್ಲಿ ಇದ್ದ ನೌಕರರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿದ್ದೇವೆ. ಪ್ರೈಮರಿ‌ ಕಾಂಟ್ಯಾಕ್ಟ್​ನಲ್ಲೇ ಸಂಖ್ಯೆ ಹೆಚ್ಚಾಗಿದೆ. ನೌಕರರ ಕುಟುಂಬ ವರ್ಗದವರಲ್ಲೇ ಹರಡುತ್ತಿರುವುದನ್ನು ಗಮನಿಸಿದ್ದೇವೆ. ಅತೀ ಹೆಚ್ಚಿನ ಕಾಳಜಿಯನ್ನು ಮೈಸೂರು ಜಿಲ್ಲೆ ಮತ್ತು ನಂಜನಗೂಡು ತಾಲೂಕಿಗೆ ಮಾಡಬೇಕಾಗಿದೆ ಎಂದರು.

ಜುಬಿಲಂಟ್ ಕಂಪನಿಗೆ ಚೀನಾದಿಂದ ಕಂಟೈನರ್ ಬಂದಿದೆ, ಅದರಿಂದಲೇ ಕೊರೊನಾ ವೈರಸ್ ಹರಡಿತಾ ಎನ್ನುವ ಬಗ್ಗೆ ಕಂಟೈನರ್​ನ ಸ್ಯಾಂಪಲ್​ಗಳನ್ನು ಜಪಾನ್​ಗೆ ಕಳಿಸಿದ್ದೇವೆ. ಅದರ ವರದಿ ಇನ್ನೂ ಬಂದಿಲ್ಲ ಎಂದರು.

ABOUT THE AUTHOR

...view details