ಬೆಂಗಳೂರು :ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧಸಿದಂತೆ ನಟಿ ರಾಗಿಣಿಯನ್ನ ಇಂದು ನ್ಯಾಯಾಲಯ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದ ಕಾರಣ, ಮಹಿಳಾ ಸಾಂತ್ವನ ಕೇಂದ್ರದಲ್ಲೇ ಸಿಸಿಬಿ ತನಿಖಾಧಿಕಾರಿಗಳಾದ ಅಂಜುಮಾಲಾ ಮತ್ತು ಪೂರ್ಣಿಮಾ ಅವರ ತಂಡ ರಾಗಿಣಿ ವಿಚಾರಣೆ ಮುಗಿಸಿ ಮತ್ತೆ ಸಿಸಿಬಿ ಕಚೇರಿಗೆ ಬಂದಿದೆ.
ಕಸ್ಟಡಿ ವಿಚಾರ ತಿಳಿದು ಸಾಂತ್ವನ ಕೇಂದ್ರದಲ್ಲಿ ನಟಿ ರಾಗಿಣಿ ತನಿಖಾಧಿಕಾರಿಗಳ ಎದುರು ಭಾವುಕರಾಗಿದ್ದಾರೆ. ಅನಾರೋಗ್ಯ ನೆಪ ನೀಡಿದ್ರೆ ಬೇಲ್ ಸಿಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದರು ರಾಗಿಣಿ. ಆದರೆ, ಪೊಲೀಸರು ಮತ್ತೆ ವಿಚಾರಣೆ ಅಗತ್ಯತೆಗೆ ಕಸ್ಟಡಿ ಕೇಳಿದ ಕಾರಣ ಪೊಲೀಸರ ಪ್ರಶ್ನೆಗೆ ರಾಗಿಣಿ ಮೌನವಾಗಿದ್ದಾರೆ. ಕಳೆದ ಮೂರು ದಿನಗಳಿಂದ ಅನಾರೋಗ್ಯ ನೆಪದಿಂದ ವಿಚಾರಣೆಗೆ ಸರಿಯಾಗಿ ರಾಗಿಣಿ ಸ್ಪಂದಿಸರಲಿಲ್ಲ.
ಪ್ರಕರಣದಲ್ಲಿ ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸದಿದ್ರೆ ಮತ್ತಷ್ಟು ಸಂಕಷ್ಟದ ಬಗ್ಗೆ ರಾಗಿಣಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಕೊಂಚ ವಿಚಾರಣೆಯನ್ನ ಅಧಿಕಾರಿಗಳು ನಡೆಸಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿ ಸಾಗುತ್ತಿರುವ ಕಾರಣ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ರಾಗಿಣಿ ವಿಚಾರಣೆ ನಡೆಸಿದ ಇನ್ಸ್ಪೆಕ್ಟರ್ಗಳಾದ ಅಂಜುಮಲಾ ನಾಯ್ಕ್, ಇನ್ಸ್‌ಪೆಕ್ಟರ್ ಪುನೀತ್ ಜತೆ ಸಂದೀಪ್ ಪಾಟೀಲ್ ಚರ್ಚೆ ನಡೆಸಿದ್ದಾರೆ.
ಇಂದಿನ ವಿಚಾರಣೆಯಲ್ಲಿ ಯಾವೆಲ್ಲಾ ಮಾಹಿತಿ ರಾಗಿಣಿ ಕೊಟ್ರು. ಪ್ರಶ್ನೆಗಳಿಗೆ ಉತ್ತರ ನೀಡಿದ್ರಾ?. ಮುಂದಿನ ಐದು ದಿನ ಸಿಸಿಬಿ ಕಸ್ಟಡಿ ಹಿನ್ನಲೆ ರಾಗಿಣಿಗೆ ಯಾವ ರೀತಿ ವಿಚಾರಣೆ ನಡೆಸಬೇಕು. ಯಾವೆಲ್ಲಾ ಟೆಕ್ನಿಕಲ್ ಸಾಕ್ಷ್ಯಗಳನ್ನ ಇಟ್ಟುಕೊಂಡು ತನಿಖೆ ನಡೆಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ಮತ್ತೊಂದೆಡೆ ಇಂದು ಆರೋಪಿ ನಿಯಾಜ್ನನ್ನು ವಶಕ್ಕೆ ಪಡೆಯಲಾಗಿದ್ದು, ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದಾರೆ.