ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಿಂದ (ಹೆಚ್‌ಎಎಲ್) ವಿವಿಧ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 185 ಮ್ಯಾನೇಜ್ಮೆಂಟ್ ಮತ್ತು ಡಿಸೈನ್ ಟ್ರೈನಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಭಾರತದಾದ್ಯಂತ ನೇಮಕಾತಿ ನಡೆಯಲಿದೆ. ಬೆಂಗಳೂರು, ತುಮಕೂರು, ಹೈದರಾಬಾದ್, ನಾಸಿಕ್, ಖೋರ್ಪಾಟ್, ಬ್ಯಾರಕ್ಪೊರ್, ಲಕ್ನೋ ಮತ್ತು ಕೊರ್ವಾದಲ್ಲಿ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ: ಡಿಸೈನ್ ಇಂಜಿನಿಯರಿಂಗ್ನಲ್ಲಿ 95, ಮ್ಯಾನೇಜ್ಮೆಂಟ್ ಟ್ರೈನಿಯಲ್ಲಿ ಒಟ್ಟು 90 ಹುದ್ದೆಗಳು.
ವಿದ್ಯಾರ್ಹತೆ: ಅಭ್ಯರ್ಥಿಗಳು ಏರೋನಾಟಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಮೆಟಾಲ್ಯೂರ್ಜಿ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ಪದವಿಯನ್ನು ಶೇ 60ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿರಬೇಕು. ಅಂತಿಮ ವರ್ಷದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಗರಿಷ್ಠ ವಯೋಮಿತಿ 28 ವರ್ಷ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ.