ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSIIDC)ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕಂಪನಿ ಸೆಕ್ರಟರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ: ಕೆಎಸ್ಐಐಡಿಸಿಯಲ್ಲಿ ಖಾಲಿ ಇರುವ ವೃತ್ತಿಪರ ಅನುಭವವುಳ್ಳವರಿಗೆ ಕಂಪನಿ ಸೆಕ್ರೆಟರಿ ಸೇವೆಗಳ ಹುದ್ದೆಗಳು. ಈ ಕ್ಷೇತ್ರದಲ್ಲಿ ಮೂರರಿಂದ ಐದು ವರ್ಷದ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ವಿದ್ಯಾರ್ಹತೆ: ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು. ಹೆಚ್ಚುವರಿಯಾಗಿ ಎಲ್ಎಲ್ಬಿ ವಿದ್ಯಾರ್ಹತೆ ಹಾಗೂ ಸಾರ್ವಜನಿಕ ಉದ್ಯಮ ವಲಯದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ. ಹುದ್ದೆ ಸಂಪೂರ್ಣ ಗುತ್ತಿಗೆ ಆಧಾರಿತ. ಒಂದು ವರ್ಷದ ಅವಧಿ ಹೊಂದಿದೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ ವಿಸ್ತರಣೆ ನಡೆಯಲಿದೆ. ಅಭ್ಯರ್ಥಿಗಳು ಕನ್ನಡ ಭಾಷೆಯಲ್ಲಿ ಓದಲು, ಬರೆಯಲು ಮತ್ತು ಮಾತನಾಡುವ ಸಾಮರ್ಥ್ಯ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಗರಿಷ್ಟ ವಯೋಮಿತಿ 35 ವರ್ಷ ಮೀರಿರಬಾರದು.
ವೇತನ: ಮಾಸಿಕ ಕ್ರೋಡೀಕೃತ ವೇತನ 1 ಲಕ್ಷ ರೂಪಾಯಿ ಜೊತೆಗೆ ಸಾರಿಗೆ ವೆಚ್ಚ ಇರಲಿದೆ.