ಕರ್ನಾಟಕ

karnataka

ETV Bharat / state

Job Alert: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - ಹುದ್ದೆಗಳ ಭರ್ತಿಗೆ ಅಧಿಸೂಚನೆ

ಪೋಷಣ್​ ಅಭಿಯಾನದ ಅಡಿ ಈ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Job notification From dwcwd under poshan Scheme
Job notification From dwcwd under poshan Scheme

By ETV Bharat Karnataka Team

Published : Sep 19, 2023, 4:28 PM IST

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪೋಷಣ್​ ಅಭಿಯಾನ ಯೋಜನೆಯಡಿ ಈ ಹುದ್ದೆ ಭರ್ತಿ ನಡೆಸಲಾಗುವುದು. ಒಟ್ಟು ಐದು ಹುದ್ದೆಗಳ ನೇಮಕಾತಿ ನಡೆಸಲಾಗುವುದು. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಸೂಚನೆ

ಹುದ್ದೆ ವಿವರ: ಪೋಷಣ್​ ಅಭಿಯಾನ ಯೋಜನೆ ಅಡಿ ಪ್ರೋಜೆಕ್ಟ್​​ ಅಸೋಸಿಯೇಟ್ -1, ಸೆಕ್ರೆಟರಿಯೇಟ್​ ಅಸಿಸ್ಟೆಂಟ್​ 2, ಆಫೀಸರ್​ ಮೆಸೆಂಜರ್ಸ್​​ 2 ಹುದ್ದೆಗಳ ಭರ್ತಿ ನಡೆಸಲಾಗುವುದು.

  • ವಿದ್ಯಾರ್ಹತೆ:
  • ಪ್ರಾಜೆಕ್ಟ್​ ಅಸೋಸಿಯೇಟ್​​: ಕಂಪ್ಯೂಟರ್​ ಸೈನ್ಸ್​ನಲ್ಲಿ ಪದವಿ
  • ಸೆಕ್ರೆಟರಿಯೇಟ್​ ಅಸಿಸ್ಟೆಂಟ್​​: ಪಿಯುಸಿ
  • ಆಫೀಸರ್​ ಮೆಸೆಂಜರ್ಸ್​​: ಎಸ್​​ಎಸ್​ಎಲ್​ಸಿ

ಅನುಭವ: ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಒಂದರಿಂದ ಎರಡು ವರ್ಷದ ಹುದ್ದೆ ಅನುಭವವನ್ನು ಹೊಂದಿರಬೇಕು.

ವೇತನ:

  • ಪ್ರಾಜೆಕ್ಟ್​ ಅಸೋಸಿಯೇಟ್​​ - 25,000 ರೂ.
  • ಸೆಕ್ರೆಟರಿ ಅಸಿಸ್ಟಂಟ್​​ - 15,000 ರೂ.
  • ಆಫೀಸರ್​ ಮೆಸೆಂಜರ್ಸ್​​ - 8,000 ರೂ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 65 ವರ್ಷ ಆಗಿರಬೇಕು.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವಾ ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಸ್ವ ವಿವರ ಮತ್ತು ಶೈಕ್ಷಣಿಕ ದಾಖಲಾತಿ ಪ್ರಮಾಣ ಪತ್ರಗಳನ್ನು ಈ ಕೆಳಗಿನ ವಿಳಾಸಕ್ಕೆ ಅಂತಿನ ದಿನಾಂಕಕ್ಕೆ ಮುಂಚೆ ತಲುಪಿಸಬೇಕು. ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ನಿಗದಿಸಲಾಗಿದೆ.

ವಿಶೇಷ ಸೂಚನೆ: ಈ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಹುದ್ದೆ ಅವಧಿ 11 ತಿಂಗಳು ಆಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಓದಲು, ಬರೆಯಲು ಮತ್ತು ಅರ್ಥೈಸಿಕೊಳ್ಳಲು ಬರಬೇಕು.

ಅರ್ಜಿ ಸಲ್ಲಿಸುವ ವಿಳಾಸ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 1ನೇ ಮಹಡಿ, ಬಹು ಮಹಡಿ ಕಟ್ಟಡ, ಡಾ. ಅಂಬೇಡ್ಕರ್​ ವೀಧಿ, ಬೆಂಗಳೂರು- 560001

ಈ ಹುದ್ದೆಗೆ ಸೆಪ್ಟೆಂಬರ್​ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 27 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ dwcd.karnataka.gov.in ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಐಡಿಬಿಐನ 600 ಜ್ಯೂನಿಯರ್​ ಅಸಿಸ್ಟಂಟ್​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ABOUT THE AUTHOR

...view details