ಬೆಂಗಳೂರು: ಶೋಕಿ ಜೀವನಕ್ಕಾಗಿ ಬೈಕ್ಗಳನ್ನು ಕದಿಯುವುದೇ ಕಾಯಕ ಮಾಡಿಕೊಂಡಿದ್ದ ನಾಲ್ವರ ಖದೀಮರನ್ನು ಜೆ.ಜೆ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತೌಫಿಕ್ ಪಾಶಾ, ಅಮೀನ್ ಪಾಶಾ, ಅಫ್ರೀದ್ ಖಾನ್ ಹಾಗೂ ಸಲ್ಮಾನ್ ಬಂಧಿತ ಆರೋಪಿಗಳು.
ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಲ್ಲಿ 16 ಬೈಕ್ಗಳ ಕದ್ದ ಖದೀಮರು ! - 4 bike thieves areested in bengaluru
ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಿಗೆ 16 ಬೈಕ್ಗಳನ್ನು ಕದ್ದಿರುವ ನಾಲ್ಕು ಖದೀಮರು. ಸಿಸಿಟಿವಿ ಇರದಂತಹ ಸ್ಥಳಗಳಿಂದ ಬೈಕ್ಗಳನ್ನು ಕದಿಯುತ್ತಿದ್ದರು. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.
![ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಲ್ಲಿ 16 ಬೈಕ್ಗಳ ಕದ್ದ ಖದೀಮರು ! bike theft case](https://etvbharatimages.akamaized.net/etvbharat/prod-images/768-512-15652588-thumbnail-3x2-cybr.jpg)
ಜೈಲಿನಿಂದ ಹೊರಬಂದ ನಾಲ್ಕೇ ತಿಂಗಳಿನಲ್ಲಿ 16 ಬೈಕ್ಗಳ ಕದ್ದ ಖದೀಮರು !
ಜೆಜೆ ನಗರ ನಿವಾಸಿಗಳಾದ ಇವರು ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿ ನಾಲ್ಕು ತಿಂಗಳುಗಳ ಹಿಂದಷ್ಟೆ ಬಿಡುಗಡೆಯಾಗಿದ್ದರು. ಜೈಲಿನಿಂದ ಹೊರಬಂದ ಕಳ್ಳರು 16 ಬೈಕ್ಗಳನ್ನು ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಇರದ ಜಾಗವನ್ನು ನೋಡಿ ಬೈಕ್ಗಳನ್ನು ಕದಿಯುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ 10 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಒಟಿಪಿ ಪಡೆದು ಬ್ಯಾಂಕ್ ನಿಂದ 8 ಲಕ್ಷ ರೂಪಾಯಿ ಲೋನ್ : 7.47ಲಕ್ಷ ಪಂಗನಾಮ !