ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಕ್ಷಿಣ ಭಾರತದ ಚಿತ್ರರಂಗ ಅಸಮಾಧಾನ ವ್ಯಕ್ತಪಡಿಸಿದೆ.
ನವರಸ ನಾಯಕ ಜಗ್ಗೇಶ್ ಪ್ರಧಾನಿ ಮೋದಿಗೆ ಸೈಲೆಂಟ್ ಆಗಿಯೇ ಟಾಂಗ್ ಕೊಟ್ಟಿದ್ದೇಕೆ? - jggesh tweet tang opposite PM modi
ಕಳೆದ ಶನಿವಾರ "ಚೇಂಜ್ ವಿಥಿನ್" ಹೆಸರಿನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳಿಗೆ ಪ್ರಧಾನಿ ಮೋದಿ ಔತಣ ಕೂಟ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಬಾಲಿವುಡ್ ಮಂದಿ, ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳನ್ನು ನೋಡಿದ ದಕ್ಷಿಣ ಚಿತ್ರರಂಗ ಕಿಡಿಕಾರಿದೆ.
ಕನ್ನಡದ ನಟ ಜಗ್ಗೇಶ್ ಟ್ವೀಟ್ ಮೂಲಕ ನಯವಾಗಿಯೇ ಪ್ರಧಾನಿ ಮೋದಿ ಕಿವಿ ಹಿಂಡಿದ್ದಾರೆ. ಕಳೆದ ಶನಿವಾರ "ಚೇಂಜ್ ವಿಥಿನ್" ಹೆಸರಿನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳಿಗೆ ಪ್ರಧಾನಿ ಮೋದಿ ಔತಣ ಕೂಟ ಏರ್ಪಡಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಬಾಲಿವುಡ್ ಮಂದಿ, ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳನ್ನು ನೋಡಿದ ದಕ್ಷಿಣ ಚಿತ್ರರಂಗ ಕಿಡಿಕಾರಿದ್ದು, ಮೊದಲನೆಯದಾಗಿ ಚಿರು ಸೊಸೆ ಉಪಾಸನಾ ಕೊಣಿಡೇಲ, ಮೋದಿಯನ್ನ ಜರಿದಿದ್ರು. ಈಗ ನಟ ಜಗ್ಗೇಶ್ ಟ್ವೀಟ್ ಮೂಲಕ ಪ್ರಧಾನಿಗೆ ಟಾಂಗ್ ಕೊಟ್ಟಿದ್ದಾರೆ.
ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಜಗ್ಗೇಶ್, ಚಿತ್ರರಂಗ ಅಂದ್ರೆ ಬರೀ ಬಾಲಿವುಡ್ ಮಾತ್ರ ಅಲ್ಲ. ದಕ್ಷಿಣ ಭಾರತದ ಕಲಾವಿದರು ನಿಮ್ಮ ನಿರ್ಧಾರಗಳನ್ನು ಗೌರವಿಸುತ್ತಾರೆ. ನಮಗೂ ಅವಕಾಶ ಕೊಡಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಉತ್ತರ ಭಾರತೀಯರಿಗಿಂತ ನಾವು ನಿಮ್ಮ ನಿರ್ಧಾರಗಳನ್ನು ಹೆಚ್ಚು ಬೆಂಬಲಿಸುತ್ತೀವಿ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.