ಬೆಂಗಳೂರು:ಸ್ನೇಹಿತೆಯ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿತೆ ಹಾಗೆ ಆಕೆಯ ಜೊತೆ ಕೈ ಜೋಡಿಸಿದ ಆರೋಪಿಯನ್ನು ಬಂಧನ ಮಾಡುವಲ್ಲಿ ಉತ್ತರ ವಿಭಾಗದ ಶ್ರೀರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಶಿಕಲಾ, ಪ್ರಶಾಂತ್ ಬಂಧಿತ ಆರೋಪಿಗಳು. ಭಾಗ್ಯಲಕ್ಷ್ಮಿ ಎಂಬುವವರು ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದು ಸ್ವತಃ ಬಟ್ಟೆ ಅಂಗಡಿ ಇಟ್ಟುಕೊಂಡಿದ್ರು. ಅಂಗಡಿ ಹೋಗಲು ಸಿದ್ಧರಾಗಿದ್ದಾಗ ಮನೆಗೆ ಸ್ನೆಹಿತೆ ಶಶಿಕಲಾ ಬಂದಿದ್ದು, ಈ ವೇಳೆ ಟೀ ಮಾಡಿಕೊಂಡು ಬರಲು ಅಡುಗೆ ಮನೆಗೆ ಹೋಗಿ ಶಶಿಕಲಾ ಅವರಿಗೆ ಟೀ ಮಾಡಿಕೊಟ್ಟಾಗ ಶಶಿಕಲಾ ಟೀ ಕುಡಿದು ತನಗೆ ತುರ್ತಾಗಿ ಕೆಲಸವಿದೆ ಎಂದು ಅವಸರದಿಂದ ಹೋಗಿದ್ದಾರೆ.
ತದನಂತರ ಭಾಗ್ಯಲಕ್ಷೀ ಅಂಗಡಿ ಹೋಗುವ ಅವಸರದಲ್ಲಿ ಮನೆಗೆ ಬೀಗ ಹಾಕದೆ ಹೋಗಿದ್ದಾರೆ. ರಾತ್ರಿ ಮನೆಗೆ ಬಂದು ನೋಡಿದಾಗ ಕೆಲವು ಚಿನ್ನಾಭರಣಗಳು ಕಳ್ಳತನವಾಗಿದೆ. ತಕ್ಷಣ ಶಶಿಕಲಾ ಅವರ ಮೇಲೆ ಅನುಮಾನ ಬಂದು ಶ್ರೀರಾಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿ ಮೊದಲು ಶಶಿಕಲಾ ಅವರನ್ನು ಬಂಧಿಸಿದ್ದಾರೆ.
ಆರೋಪಿಯನ್ನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಶಶಿಕಲಾ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಪಕ್ಕದ ಮನೆಯಲ್ಲಿ ವಾಸವಿರುವ ಮತ್ತೊಬ್ಬ ಪ್ರಶಾಂತ್ ಎಂಬುವವನಿಗೆ ಕೊಟ್ಟು ತಾನು ಪರಿಚಯದವರ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಬಂದಿದ್ದು ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಾರಾಟ ಮಾಡಿಕೊಡುವುದಾಗಿ ಹೇಳಿರುವ ವಿಚಾರ ಬಾಯಿ ಬಿಟ್ಟಿದ್ದಾಳೆ. ಸದ್ಯ ಪ್ರಶಾಂತ್ನನ್ನು ಪೊಲೀಸರು ಬಂಧಿಸಿ ಹೆಚ್ವಿನ ವಿಚಾರಣೆಗೆ ಒಳಪಡಿಸಿದ್ದಾರೆ.