ಕರ್ನಾಟಕ

karnataka

ETV Bharat / state

ಜ್ಯುವೆಲ್ಲರಿ ಶಾಪ್ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಆಭರಣ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಜ್ಯುವೆಲ್ಲರಿ ಶಾಪ್ ಶೆಟರ್ ಮುರಿದು ಕಳ್ಳತನ

ಜ್ಯುವೆಲ್ಲರಿ ಶಾಪ್​ ಪಕ್ಕದ ಗ್ರಂಧಿಗೆ ಅಂಗಡಿಯಿಂದ ಕಿಟಕಿ ಸರಳು ಮುರಿದು ಒಳ ನುಗ್ಗಿರುವ ಕಳ್ಳರು, ಚಿನ್ನವಿದ್ದ ಲಾಕರ್ ಒಡೆಯಲು ಮುಂದಾಗಿದ್ದಾರೆ. ಲಾಕರ್ ಒಪನ್ ಆಗಿಲ್ಲ.. ಆದರೂ

Jewelery shop shutter broken jewelry theft
ಜ್ಯುವೆಲ್ಲರಿ ಶಾಪ್ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಆಭರಣ ಕಳ್ಳತನ: ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ

By

Published : Aug 8, 2020, 11:56 AM IST

ಬೆಂಗಳೂರು :ಜ್ಯುವೆಲ್ಲರಿ ಶಾಪ್ ಶೆಟರ್ ಮುರಿದು ಒಳ ನುಗ್ಗಿರುವ ಖದೀಮರು ಲಕ್ಷಾಂತರ ಮೌಲ್ಯದ ಆಭರಣ ದೋಚಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.

ಜ್ಯುವೆಲ್ಲರಿ ಶಾಪ್ ಶಟರ್ ಮುರಿದು ಲಕ್ಷಾಂತರ ಮೌಲ್ಯದ ಆಭರಣ ಕಳ್ಳತನ.. ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಇಮ್ಮಡಿಹಳ್ಳಿ ಮಾತಾಜಿ ಜ್ಯುವೆಲ್ಲರಿ ಶಾಪ್​ನಲ್ಲಿ‌ ಆಗಸ್ಟ್‌ 5ರ ಬೆಳಗಿನ ಜಾವ ಈ ಘಟನೆ ನಡೆದಿದೆ‌. ಜ್ಯುವೆಲ್ಲರಿ ಶಾಪ್​ ಪಕ್ಕದ ಗ್ರಂಧಿಗೆ ಅಂಗಡಿಯಿಂದ ಕಿಟಕಿ ಸರಳು ಮುರಿದು ಒಳ ನುಗ್ಗಿರುವ ಕಳ್ಳರು, ಚಿನ್ನವಿದ್ದ ಲಾಕರ್ ಒಡೆಯಲು ಮುಂದಾಗಿದ್ದಾರೆ. ಲಾಕರ್ ಒಪನ್ ಆಗದ ಕಾರಣ ಅಲ್ಲೇ‌ ಇದ್ದ 35 ಲಕ್ಷ ಮೌಲ್ಯದ 50 ಕೆಜಿ ಬೆಳ್ಳಿವಸ್ತು ಹಾಗೂ ₹10 ಸಾವಿರ ನಗದು ದೋಚಿದ್ದಾರೆ.

ಕಳ್ಳರ ಚಲನವಲನ, ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ಧರ್ಮರಾಮ್ ಎಂಬುವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ವೈಟ್‌ಫೀಲ್ಡ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details