ಕರ್ನಾಟಕ

karnataka

ETV Bharat / state

ಕರ್ನಾಟಕ ಭಾರತದ ಕಾಫಿ ತವರು : ಜೆವ್ ಸೀಗಲ್ ಬಣ್ಣನೆ - ವಿಶ್ವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

ಕರ್ನಾಟಕವನ್ನು ಭಾರತದ ಕಾಫಿ ತವರು ಎಂದು ಜಾಗತಿಕ ಕಾಫಿ ಕ್ಷೇತ್ರದ ದೈತ್ಯ ಉದ್ಯಮಿ ಸ್ಟಾರ್ ಬಕ್ಸ್ ಸಹ ಸಂಸ್ಥಾಪಕ ಜೆವ್ ಸೀಗಲ್ ಶ್ಲಾಘಿಸಿದ್ದಾರೆ. ತಮ್ಮಉದ್ಯಮಶೀಲತೆಯ ಪ್ರಯಾಣ ಮತ್ತು ಸ್ಟಾರ್‌ಬಕ್ಸ್ ಬ್ರಾಂಡ್ ಅನ್ನು ಬಲಪಡಿಸುವಲ್ಲಿನ ಪ್ರಯತ್ನಗಳನ್ನು ವಿವರಿಸಿದ್ದಾರೆ.

Jev Siegel speaks about karnataka
ಸಂವಾದದಲ್ಲಿ ಪಾಲ್ಗೊಂಡ ಜೆವ್ ಸೀಗಲ್

By

Published : Nov 4, 2022, 4:44 PM IST

ಬೆಂಗಳೂರು:ಕರ್ನಾಟಕವು ಭಾರತದ ಕಾಫಿ ತವರು ಎಂದು ಜಾಗತಿಕ ಕಾಫಿ ಕ್ಷೇತ್ರದ ದೈತ್ಯ ಉದ್ಯಮಿ ಸ್ಟಾರ್ ಬಕ್ಸ್ ಸಹ ಸಂಸ್ಥಾಪಕ ಜೆವ್ ಸೀಗಲ್ ಶ್ಲಾಘಿಸಿದ್ದಾರೆ. ಇವರು ವಿಶ್ವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ, ಭಾರತವು ನಾವೀನ್ಯತೆ ಕ್ರಾಂತಿಯನ್ನು ಹೇಗೆ ಮುನ್ನಡೆಸಬಹುದು ಎಂಬ ವಿಷಯದ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ, ತಮ್ಮ ಉದ್ಯಮಶೀಲತೆಯ ಪ್ರಯಾಣ ಮತ್ತು ಸ್ಟಾರ್‌ಬಕ್ಸ್ ಬ್ರಾಂಡ್ ಅನ್ನು ಬಲಪಡಿಸುವಲ್ಲಿನ ಪ್ರಯತ್ನಗಳನ್ನು ವಿವರಿಸಿದರು. 70 ರ ದಶಕದಲ್ಲಿ ಕಂಪನಿ ಸ್ಥಾಪನೆ, 80 ರಲ್ಲಿ ಎದುರಿಸಿದ ಸಂಕಷ್ಟಗಳು ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಯಶಸ್ವಿ ಉದ್ಯಮಿಯಾಗಲು ಪಟ್ಟ ಕಷ್ಟಗಳ ವಿವರ ನೀಡಿ ಯುವ ಉದ್ಯಮಿಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

ಬ್ರಾಂಡಿಂಗ್‌ನ ಗುಣಮಟ್ಟದಲ್ಲಿ ಯಾರೂ ರಾಜೀ ಆಗಬಾರದು. ಯಶಸ್ವಿ ಉದ್ಯಮಿಯಾಗಲು ಬಯಸುವವರು ಬ್ರ್ಯಾಂಡ್ ಮೌಲ್ಯ ಕಾಪಾಡಿಕೊಳ್ಳಬೇಕು. ಕಾಫಿ ಕ್ಷೇತ್ರದಲ್ಲಿ ಉದ್ಯಮ ಆರಂಭಿಸುವ ಮುನ್ನ ಕಾಫಿ ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿಯೇ ತಿಳಿದಿರಲಿಲ್ಲ. ಆದರೂ ಉದ್ಯಮಕ್ಕೆ ಕಾಲಿಟ್ಟ ನಾನು ನನ್ನ ಬಂಧುವೊಬ್ಬರಲ್ಲಿ ಕೇಳಿ ತಿಳಿದುಕೊಂಡೆ. ಇದು ನಾನು ಕಾಫಿ ಕ್ಷೇತ್ರದ ಉದ್ಯಮದಲ್ಲಿ ಯಶಸ್ವಿಯಾಗಲು ಕಾರಣವಾಯಿತು. ಯಾರೇ ಆಗಲಿ ಉದ್ಯಮ ಆರಂಭಿಸುವ ಮೊದಲು ಆ ಉದ್ಯಮದ ಕುರಿತು ಸಮಗ್ರವಾಗಿ ತಿಳಿದುಕೊಂಡಿರಬೇಕು ಎಂದರು.

ಭಾರತದಲ್ಲಿ ನಮ್ಮ ಕಂಪನಿಯ 300 ಮಳಿಗೆಗಳಿವೆ. ನನ್ನ ಗ್ರಾಹಕರ ಬೇಕು ಬೇಡಗಳನ್ನು ತಿಳಿದುಕೊಂಡು ವ್ಯವಹಾರ ನಡೆಸುತ್ತಿರುವುದರಿಂದ ಯಶಸ್ಸು ಸಿಗುತ್ತಿದೆ. ಉದ್ಯಮಿಗಳಾಗಲು ಇದಕ್ಕಿಂತ ಒಳ್ಳೆಯ ಸಮಯ ಇನ್ನೊಂದಿಲ್ಲ. ಜಾಗತಿಕ ಸಾಂಕ್ರಾಮಿಕವು ವ್ಯವಹಾರಗಳಿಗೆ ಸಮಸ್ಯೆ ತಂದಿದ್ದರೂ ನಾವೀನ್ಯತೆ ಮತ್ತು ಹೂಡಿಕೆಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಿದೆ ಎಂದರು.

ಸಂವಾದದಲ್ಲಿ ಪಾಲ್ಗೊಂಡ ಜೆವ್ ಸೀಗಲ್

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ನಾವೀನ್ಯತೆಯನ್ನು ಹೇಗೆ ಉತ್ತೇಜಿಸುತ್ತಿವೆ ಎಂಬುದರ ಕುರಿತು ಐಎಸ್ಎನ್ ಪ್ರಸಾದ್ ಪ್ರಸ್ತಾಪಿಸಿದರು. ಸ್ಟಾರ್‌ಬಕ್ಸ್‌ನಂತಹ ಜಾಗತಿಕ ಬ್ರಾಂಡ್‌ಗಳನ್ನು ನಿರ್ಮಿಸುವ ಭಾರತೀಯ ಕಂಪನಿಗಳ ಅಗತ್ಯವನ್ನು ಪ್ರಶಾಂತ್ ಪ್ರಕಾಶ್ ಒತ್ತಿ ಹೇಳಿದರು.

ಇದನ್ನೂ ಓದಿ:ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಇಂದು ತೆರೆ, ಗಡ್ಕರಿ ಗೈರು

ABOUT THE AUTHOR

...view details