ಬೆಂಗಳೂರು: ಸಭಾಪತಿ ಸ್ಥಾನಕ್ಕೆ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ನೀಡುತ್ತಾರೆ ಎನ್ನುವ ಮಾಹಿತಿ ಹಿನ್ನೆಲೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸಭಾಪತಿ ಕಚೇರಿಗೆ ಭೇಟಿ ನೀಡಿ ಸೌಹಾರ್ದಯುತ ಮಾತುಕತೆ ನಡೆಸಿದರು.
ಪರಿಷತ್ ಸಭಾಪತಿ ಭೇಟಿಯಾದ ಹೊರಟ್ಟಿ: ಪರಸ್ಪರ ಶುಭಾಶಯ ವಿನಿಮಯ - ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ
ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸಭಾಪತಿ ಕಚೇರಿಗೆ ಭೇಟಿ ನೀಡಿ ಪ್ರತಾಪ್ ಚಂದ್ರ ಶೆಟ್ಟಿ ಅವರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದರು.
ಹಾಲಿ ಸಭಾಪತಿಯನ್ನು ಭೇಟಿಯಾದ ಭಾವಿ ಸಭಾಪತಿ
ಸಂಜೆ ಕಲಾಪದಿಂದ ಸ್ವಲ್ಪ ಬಿಡುವು ಮಾಡಿಕೊಂಡ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಚೇರಿಯಲ್ಲಿ ಆಸೀನರಾಗಿದ್ದ ವೇಳೆ ಬಸವರಾಜ ಹೊರಟ್ಟಿ ಭೇಟಿಯಾದರು. ಈ ವೇಳೆ ಎದ್ದು ನಿಂತು ಇಬ್ಬರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ಕೆಲಕಾಲ ಮಾತುಕತೆ ನಡೆಸಿದರು.
ಪ್ರತಾಪ್ ಚಂದ್ರ ಶೆಟ್ಟಿ ಅವರು ಇಂದು ರಾಜೀನಾಮೆ ನೀಡುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಕೆಗೂ ಮುನ್ನ ಸೌಹಾರ್ದಯುತವಾಗಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಭೇಟಿಯಾಗಿ ಬಸವರಾಜ ಹೊರಟ್ಟಿ ಮಾತುಕತೆ ನಡೆಸಿದರು ಎನ್ನಲಾಗ್ತಿದೆ.