ಕರ್ನಾಟಕ

karnataka

ETV Bharat / state

ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಅಂದ್ರೆ ದೇವೇಗೌಡ, ಕುಮಾರಸ್ವಾಮಿಗೆ ಅಪಮಾನ ಮಾಡಿದಂತೆ: ಸಿಎಂ - Bangalore latest update news

ಜೆಡಿಎಸ್ ಮಾಜಿ ಪ್ರಧಾನಿ ದೇವೇಗೌಡರು ಕಟ್ಟಿರುವ ಪಕ್ಷ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಆ ಪಕ್ಷದ ಅಧ್ಯಕ್ಷರು ಅವರ ಪಕ್ಷವನ್ನು ಬೆಳೆಸಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆ ಪಕ್ಷ ವಿಲೀನ ಆಗುತ್ತದೆ ಎಂದು ಮಾತನಾಡುವುದು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಅಪಮಾನ ಮಾಡಿದಂತೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

CM . B.S Yaduyurappa
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Dec 21, 2020, 1:41 PM IST

Updated : Dec 21, 2020, 2:25 PM IST

ಬೆಂಗಳೂರು: ಜೆಡಿಎಸ್ ಪಕ್ಷ ಬಿಜೆಪಿಯಲ್ಲಿ ವಿಲೀನ ಆಗುತ್ತದೆ ಎಂದು ಮಾತನಾಡುವುದು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಅಪಮಾನ ಮಾಡಿದಂತೆ. ಈ ರೀತಿ ನಾನು ಮಾತನಾಡಲು ಸಿದ್ಧವಿಲ್ಲ. ಬೇರೆ ಯಾರೂ ಕೂಡಾ ಮಾತಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ

ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮಾಜಿ ಪ್ರಧಾನಿ ದೇವೇಗೌಡರು ಕಟ್ಟಿರುವ ಪಕ್ಷ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಆ ಪಕ್ಷದ ಅಧ್ಯಕ್ಷರು ಅವರ ಪಕ್ಷವನ್ನು ಬೆಳೆಸಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆ ಪಕ್ಷ ವಿಲೀನ ಆಗುತ್ತದೆ ಎಂದು ಮಾತನಾಡುವುದು ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಅಪಮಾನ ಮಾಡಿದಂತೆ ಎಂದರು.

ಓದಿ: ಬಿಜೆಪಿ ಜೊತೆ ಜೆಡಿಎಸ್ ವಿಲೀನ ಸತ್ಯಕ್ಕೆ ದೂರ : ಸಿಎಂ‌ ಬಿಎಸ್​ವೈ ಸ್ಪಷ್ಟನೆ

ವಿಧಾನ ಪರಿಷತ್​​ನಲ್ಲಿ ಸಭಾಪತಿ ಇಳಿಸುವ ವಿಚಾರದಲ್ಲಿ ನಾವು ಜೆಡಿಎಸ್ ಸಹಕಾರ ಕೇಳಿದ್ದೆವು. ಅವರು ನಮಗೆ ಸಹಕಾರ ಕೊಟ್ಟಿದ್ದಾರೆ. ಇನ್ನು ಮುಂದೆಯೂ ಅಗತ್ಯವಿದ್ದ ಸಮಯದಲ್ಲಿ ನಮಗೆ ಸಹಕಾರ ಕೊಡಬಹುದು. ಅವರು ಪಕ್ಷವನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ವಿಲೀನ ಆಗುತ್ತಾರೆ ಎಂದು ಹೇಳುವುದು ಶೋಭೆ ತರಲ್ಲ. ಆ ಪ್ರಶ್ನೆ ಈಗ ಇಲ್ಲ. ಇನ್ನೂ ಚುನಾವಣೆಗೆ ಎರಡೂವರೆ ವರ್ಷ ಇದೆ. ನಮ್ಮ ಪಾಡಿಗೆ ನಾವು ಪಕ್ಷ ಕಟ್ಟುತ್ತೇವೆ. ಅವರ ಪಾಡಿಗೆ ಅವರು ಪಕ್ಷ ಕಟ್ಟುತ್ತಾರೆ. ಯಾರೂ ಆ ರೀತಿ ಮಾತಾಡಬಾರದು. ನಮ್ಮ ಪಕ್ಷದಲ್ಲಿಯೂ ಯಾರೂ ಆ ರೀತಿ ಮಾತಾಡಬಾರದು ಎಂದು ಸಿಎಂ ಸೂಚನೆ ನೀಡಿದರು.

Last Updated : Dec 21, 2020, 2:25 PM IST

ABOUT THE AUTHOR

...view details