ಬೆಂಗಳೂರು:ಜೆಡಿಎಸ್ ಅಭ್ಯರ್ಥಿಯನ್ನು ಜಾತಿ ಹೆಸರಿನಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಯಡಿಯೂರಪ್ಪನವರೇ ನಿಮ್ಮ ಪಕ್ಷದ ಸಂಸ್ಕೃತಿ ಇದೇನಾ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರೇ ಇದೇನಾ ನಿಮ್ಮ ಪಕ್ಷದ ಸಂಸ್ಕೃತಿ?: ಜೆಡಿಎಸ್ ಎಂಎಲ್ಸಿ ಶರವಣ ಪ್ರಶ್ನೆ - ಗಿರೀಶ್ ಕೆ. ನಾಶಿ ಅವರು ಬುದ್ದಿವಂತರು, ಪ್ರಾಮಾಣಿಕರು ಎಂದ ಶರವಣ
ಜೆಡಿಎಸ್ ಅಭ್ಯರ್ಥಿ ಡಾ. ಗಿರೀಶ್ ಕೆ. ನಾಶಿ ಅವರ ಮೇಲೆ ಸಿಎಂ ಬಿಎಸ್ವೈ ಮಾಡಿರುವ ಟೀಕೆಗಳನ್ನು ಖಂಡಿಸಿ ಜೆಡಿಎಸ್ ಎಂಎಲ್ಸಿ ಶರವಣ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
![ಯಡಿಯೂರಪ್ಪನವರೇ ಇದೇನಾ ನಿಮ್ಮ ಪಕ್ಷದ ಸಂಸ್ಕೃತಿ?: ಜೆಡಿಎಸ್ ಎಂಎಲ್ಸಿ ಶರವಣ ಪ್ರಶ್ನೆ ಶರವಣ](https://etvbharatimages.akamaized.net/etvbharat/prod-images/768-512-5193765-thumbnail-3x2-zxdg.jpg)
ಶರವಣ
ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ನಮ್ಮ ಅಭ್ಯರ್ಥಿ ಡಾ. ಗಿರೀಶ್ ಕೆ. ನಾಶಿ ಅವರು ಬುದ್ಧಿವಂತರು, ಪ್ರಾಮಾಣಿಕರು. ಹಾಗಾಗಿ ಅವರನ್ನು ಪಕ್ಷದ ವತಿಯಿಂದ ಆಯ್ಕೆ ಮಾಡಿದ್ದಾರೆ. ಇನ್ನು ನಿಮ್ಮ ಜಾತಿಯವರೇ ಆದ ಅವರನ್ನು ಈ ರೀತಿಯಲ್ಲಿ ನಿಂದನೆ ಮಾಡುತ್ತಿರುವುದು ಸರಿನಾ ಎಂದು ಪ್ರಶ್ನಿಸಿದರು.
ಜೆಡಿಎಸ್ ಎಂಎಲ್ಸಿ ಶರವಣ
ಪೊಲೀಸರ ಮುಂದೆಯೇ ನಮ್ಮ ಅಭ್ಯರ್ಥಿಯನ್ನು ಜಾತಿ ನಿಂದನೆ ಮಾಡಲಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಆಯೋಗ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.