ಬೆಂಗಳೂರು: ವಿಧಾನಪರಿಷತ್ ಜೆಡಿಎಸ್ ಸದಸ್ಯ ಸ್ಥಾನಕ್ಕೆ ಸಿ.ಆರ್.ಮನೋಹರ್ ಇಂದು ರಾಜೀನಾಮೆ ಸಲ್ಲಿಕೆ ಮಾಡಿದ್ದು, ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಇದೆ.
ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್ ಸದಸ್ಯ ಸಿ.ಆರ್.ಮನೋಹರ್ ರಾಜೀನಾಮೆ - ಸಿ.ಆರ್.ಮನೋಹ
ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ ಸಿ.ಆರ್.ಮನೋಹರ್ ರಾಜೀನಾಮೆ ಸಲ್ಲಿಸಿದ್ದಾರೆ. ಬಹುದಿನಗಳಿಂದ ಜೆಡಿಎಸ್ನಿಂದ ದೂರವೇ ಇದ್ದ ಇವರ ಸದಸ್ಯತ್ವ ಬರುವ ವರ್ಷ ಫೆಬ್ರುವರಿ 5 ಮುಕ್ತಾಯವಾಗುತ್ತಿತ್ತು.
ರಾಜೀನಾಮೆ ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ, ವಿಧಾನ ಪರಿಷತ್ನ ಸದಸ್ಯತ್ವಕ್ಕೆ ಸಿ.ಆರ್.ಮನೋಹರ್ ರಾಜೀನಾಮೆ ನೀಡಿದ್ದಾರೆ. ನಿನ್ನೆ ನಾನು ದೆಹಲಿಗೆ ಹೋಗಿದ್ದೆ, ಹೀಗಾಗಿ ಇಂದು ರಾಜೀನಾಮೆ ಕೊಟ್ಟಿದ್ದಾರೆ. ಯಾವುದೇ ಒತ್ತಡದಿಂದ ಅವರು ನಿರ್ಧಾರ ತೆಗೆದುಕೊಂಡಿಲ್ಲ. ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ನೀಡಿದ್ದು, ಅಂಗೀಕರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಸಿ.ಆರ್.ಮನೋಹರ್ ಮಾತನಾಡಿ, ಜೆಡಿಎಸ್ನಿಂದ ಬಹಳ ದಿನಗಳಿಂದ ದೂರ ಇದ್ದೆ, ಅವರು ಸಹ ಈ ಬಾರಿ ಟಿಕೆಟ್ ನಿರಾಕರಿಸುವ ತೀರ್ಮಾನ ಮಾಡಿದ್ರು. ಹೀಗಾಗಿ ಜೆಡಿಎಸ್ ತೊರೆದು ರಾಜೀನಾಮೆ ನೀಡಿದ್ದೇನೆ. ಮುಂದಿನ ರಾಜಕೀಯ ತೀರ್ಮಾನ ಡಿ. 2ರಂದು ತಿಳಿಸ್ತೇನೆ ಎಂದರು.