ಬೆಂಗಳೂರು:ವಿಧಾನಸೌಧದಲ್ಲಿ ನಡೆದ ವಿಶ್ವಾಸಮತಯಾಚನೆ ಸಭೆಯ ಚರ್ಚಾ ವಿಷಯದಲ್ಲಿ ಭಾಗವಹಿಸಲು ಶುಕ್ರವಾರ ತೆರಳಿದ್ದ ಜೆಡಿಎಸ್ ಶಾಸಕರು ಕಲಾಪ ಮೂಂದೂಡಿದ ಕಾರಣ, ಮತ್ತೆ ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ಗೆ ಆಗಮಿಸಿದ್ದಾರೆ.
ಕಲಾಪ ಮುಂದೂಡಿಕೆ... ಮತ್ತೆ ರೆಸಾರ್ಟ್ಗೆ ಆಗಮಿಸಿದ ಜೆಡಿಎಸ್ ಶಾಸಕರು - Devanahalli
ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಿದ ಕಾರಣ ವಿಶ್ವಾಸಮತಯಾಚನೆ ಸಭೆಗೆ ಹಾಜರಾಗಿದ್ದ ಎಲ್ಲಾ ಜೆಡಿಎಸ್ ಶಾಸಕರು, ಇನ್ನು ಮೂರು ದಿನಗಳ ಕಾಲ ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಜೆಡಿಎಸ್ ಶಾಸಕರು
ಎಲ್ಲಾ ಜೆಡಿಎಸ್ ಶಾಸಕರು ಖಾಸಗಿ ಬಸ್ನಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ರೆಸಾರ್ಟ್ಗೆ ಆಗಮಿಸಿದ್ದಾರೆ. ಶುಕ್ರವಾರ ವಿಶ್ವಾಸಮತ ಯಾಚನೆಯನ್ನು ಸಿಎಂ ಮಾಡದ ಕಾರಣ ಹಾಗೂ ಅಧಿವೇಶನವನ್ನು ಸೋಮವಾರಕ್ಕೆ ಸ್ಪೀಕರ್ ಮುಂದೂಡಿದ ಪರಿಣಾಮ ಶಾಸಕರು ಇನ್ನು ಮೂರು ದಿನಗಳ ಕಾಲ ರೆಸಾರ್ಟ್ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಇಂದು ಮತ್ತು ನಾಳೆ ಸರ್ಕಾರಿ ರಜೆ ಇದ್ದು, ಈ ಎರಡು ದಿನಗಳಲ್ಲಿ ಶಾಸಕರು ರೆಸಾರ್ಟ್ನಿಂದ ಹೊರ ಬರುವುದು ಅನುಮಾನವಾಗಿದೆ. ಇಂದು ರೆಸಾರ್ಟ್ಗೆ ಆಗಮಿಸಿದಾಗಲೂ ಯಾವೊಬ್ಬ ಶಾಸಕ ಸಹ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.
TAGGED:
Devanahalli