ಕರ್ನಾಟಕ

karnataka

ETV Bharat / state

ರಿಲ್ಯಾಕ್ಸ್ ಮೂಡ್​​​ನಲ್ಲಿ ಜೆಡಿಎಸ್ ಶಾಸಕರು... ನಂದಿ ಬೆಟ್ಟಕ್ಕೆ ಹೋಗುವ ಸಾಧ್ಯತೆ! - undefined

ಕಳೆದ ಆರು ದಿನಗಳಿಂದ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರು ಒಂದೇ ಕಡೆ ಇದ್ದು, ಬೇಸರವೆನಿಸಿರುವ ಕಾರಣ ಹೊರಗಡೆ ಹೋಗುವ ಪ್ಲಾನ್ ಹಾಕಿದ್ದಾರೆ ಎನ್ನಲಾಗಿದೆ.

ರಿಲ್ಯಾಕ್ಸ್ ಮೂಡ್ನಲ್ಲಿ ಜೆಡಿಎಸ್ ಶಾಸಕರು

By

Published : Jul 14, 2019, 2:04 PM IST

ಬೆಂಗಳೂರು:ಕಳೆದ ಒಂದು ವಾರದಿಂದ ದೇವನಹಳ್ಳಿ ಪ್ರೆಸ್ಟಿಜ್ ಗಾಲ್ಫ್​​​ ಶೈರ್ ರೆಸಾರ್ಟ್​ನಲ್ಲಿರುವ ಜೆಡಿಎಸ್ ಶಾಸಕರು ಇಂದು ರಿಲ್ಯಾಕ್ಸ್ ಮೂಡ್​​ನಲ್ಲಿದ್ದಾರೆ.

ರಿಲ್ಯಾಕ್ಸ್ ಮೂಡ್​​ನಲ್ಲಿ ಜೆಡಿಎಸ್ ಶಾಸಕರು

ಇಂದು ಭಾನುವಾರವಾಗಿರುವುದರಿಂದ ನಂದಿ ಬೆಟ್ಟಕ್ಕೆ ಹೋಗಿ ವಿಶ್ರಮಿಸುವ ಸಾಧ್ಯತೆ ಇದೆ. ಅಲ್ಲದೆ ನಿನ್ನೆ ರಾತ್ರಿ ಸಿಎಂ ಕುಮಾರಸ್ವಾಮಿ ರೆಸಾರ್ಟ್​ಗೆ ಆಗಮಿಸಿದ್ದು, ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಭಯ ಬೀಳದಿರಿ. ಎಲ್ಲಾ ಸರಿ ಹೋಗುತ್ತದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ನಾಳೆ ನಡೆಯಲಿರುವ ಅಧಿವೇಶನಕ್ಕೆ ತೆರಳಲು ಶಾಸಕರು ಸಿದ್ಧತೆ ನಡೆಸಿದ್ದು, ಅಧಿವೇಶನದ ಬಳಿಕ ತಮ್ಮ ತಮ್ಮ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಇಂದು ಕೊನೆ ದಿನ ರೆಸಾರ್ಟ್​ನಲ್ಲಿ ಇರಲಿದ್ದಾರೆ. ಹಾಗಾಗಿ ರೆಸಾರ್ಟ್​ಗೆ ಹತ್ತಿರವಿರುವ ನಂದಿ ಬೆಟ್ಟಕ್ಕೆ ಹೋಗಿ ಬರುವ ಸಾಧ್ಯತೆ ಇದೆ.

ಕಳೆದ ಆರು ದಿನಗಳಿಂದ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರಿಗೆ ಒಂದೇ ಕಡೆ ಇದ್ದು ಬೇಸರವೆನಿಸಿದ್ದು ಹೊರಗಡೆ ಹೋಗುವ ಪ್ಲಾನ್ ಹಾಕಿದ್ದಾರೆ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details