ಬೆಂಗಳೂರು:ರಾಜ್ಯದಲ್ಲಿ ಕೊರೊನಾ (ಕೋವಿಡ್-19) ಮುನ್ನೆಚ್ಚರಿಕೆ ಕುರಿತು ವಿಧಾನಸೌಧದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದರೆ ಇತ್ತ ಪರಿಷತ್ ಸಭೆಯಲ್ಲಿ ಮಾಸ್ಕ್ ಧರಿಸಿ ಪಾಲ್ಗೊಳ್ಳುವ ಮೂಲಕ ಜೆಡಿಎಸ್ ಸದಸ್ಯ ಶರವಣ ಗಮನ ಸೆಳೆದರು.
ಪರಿಷತ್ನಲ್ಲೂ ಕೊರೊನಾ ಭೀತಿ: ಮಾಸ್ಕ್ ಧರಿಸಿ ಕಲಾಪಕ್ಕೆ ಆಗಮಿಸಿದ ಜೆಡಿಎಸ್ ಸದಸ್ಯ ಶರವಣ - Sharavana
ವಿಧಾನ ಪರಿಷತ್ನ ಕಲಾಪಕ್ಕೆ ಜೆಡಿಎಸ್ ಸದಸ್ಯ ಶರವಣ ಮಾಸ್ಕ್ ಧರಿಸಿಕೊಂಡು ಬಂದು ಎಲ್ಲರ ಗಮನ ಸೆಳೆದರು.

ವಿಧಾನ ಪರಿಷತ್ನ ಮೂರನೇ ದಿನದ ಕಲಾಪಕ್ಕೆ ಮಾಸ್ಕ್ ಧರಿಸಿಕೊಂಡು ಜೆಡಿಎಸ್ ಸದಸ್ಯ ಆಗಮಿಸಿದರು. ಕಲಾಪದ ವೇಳೆ ಮಾಸ್ಕ್ ಧರಿಸಿಯೇ ಆಸೀನರಾಗಿ ಕಲಾಪದಲ್ಲಿ ಪಾಲ್ಗೊಂಡರು. ಎಲ್ಲಾ ಸದಸ್ಯರು ಮಾಸ್ಕ್ ಇಲ್ಲದೇ ಆಗಮಿಸಿದ್ದರೂ ಶರವಣ ಮಾತ್ರ ಮಾಸ್ಕ್ ಧರಿಸಿಕೊಂಡು ಬಂದು ಗಮನ ಸೆಳೆದರು.
ಮಧ್ಯಾಹ್ನ 12 ಗಂಟೆಗೆ ಕೊರೊನಾ ವೈರಸ್ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಆರೋಗ್ಯ ಸಚಿವ ಶ್ರೀರಾಮುಲು ಸಭೆ ನಡೆಸಿದರು. ವೈರಾಣು ತಗುಲಿರುವ ವ್ಯಕ್ತಿವೋರ್ವ ಬೆಂಗಳೂರಿನಲ್ಲಿ ಒಂದು ದಿನ ಇದ್ದ ಎನ್ನುವ ಮಾಹಿತಿ ಆತಂಕ ಸೃಷ್ಟಿಸಿದ್ದು ಅದರಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸುತ್ತಿದ್ದರೆ, ಅದೇ ಆತಂಕದಿಂದ ಪರಿಷತ್ ಸದಸ್ಯ ಶರವಣ ಮಾಸ್ಕ್ ಧರಿಸಿ ಆಗಮಿಸಿದ್ದಾರೆ ಎನ್ನಲಾಗ್ತಿದೆ.