ಕರ್ನಾಟಕ

karnataka

ETV Bharat / state

ಪಕ್ಷ ಸಂಘಟನೆಗೆ ಜಿಲ್ಲಾ ಪ್ರವಾಸಕ್ಕೆ ಸಜ್ಜಾಗುತ್ತಿರುವ ಜೆಡಿಎಸ್ ನಾಯಕರು - 2023 ರ ವಿಧಾನಸಭೆ ಚುನಾವಣೆಗೆ ಜೆಡಿಎಸ್​ ಸಿದ್ಧತೆ

ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಸಂಘಟನೆಯನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳಲು ಕಾರ್ಯಕ್ರಮ ರೂಪಿಸಬೇಕು. ಸ್ಪರ್ಧಾಕಾಂಕ್ಷಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲು ಈಗಿನಿಂದಲೇ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಇನ್ನು, ವಲಯವಾರು ವೀಕ್ಷಕರ ತಂಡಗಳನ್ನು ರಚಿಸಲಾಗಿದೆ..

JDS leaders preparing for  Party organization
ಪಕ್ಷ ಸಂಘಟನೆಗೆ ಜಿಲ್ಲಾ ಪ್ರವಾಸಕ್ಕೆ ಸಜ್ಜಾಗುತ್ತಿರುವ ಜೆಡಿಎಸ್ ನಾಯಕರು!

By

Published : Aug 17, 2021, 7:55 PM IST

ಬೆಂಗಳೂರು: ಮುಂಬರುವ 2023ರ ವಿಧಾನಸಭೆ ಚುನಾವಣೆಗಾಗಿ ಜೆಡಿಎಸ್ಈಗಿನಿಂದಲೇ ತಳಮಟ್ಟದಿಂದ ಪಕ್ಷ ಬಲಪಡಿಸಲು ಮುಂದಾಗಿದೆ. ಸಂಘಟನೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಜೆಡಿಎಸ್, ಗಣೇಶ ಚತುರ್ಥಿ ನಂತರ ಜಿಲ್ಲಾ ಪ್ರವಾಸ ನಡೆಸಲು ಯೋಜಿಸಿದೆ.

ಪ್ರಸ್ತುತ ಶಾಸಕರಿರುವ ಮತ್ತು ಇಲ್ಲದಿರುವ ಕ್ಷೇತ್ರಗಳನ್ನ ಪ್ರತ್ಯೇಕ ಮಾಡಿ ಅಲ್ಲಿ ಸಂಘಟನೆಗೆ ಯಾವ ರೀತಿಯಲ್ಲಿ ಶಕ್ತಿ ತುಂಬಬೇಕು ಎಂಬ ಬಗ್ಗೆ ಚಿಂತನೆ ಮಾಡಿದ್ದಾರೆ. ಜೆಡಿಎಸ್ ಸಂಘಟನೆ ಸೊರಗಿರುವ ಜಿಲ್ಲೆಗಳು ಮತ್ತು ನೆಲೆಯೇ ಇಲ್ಲದ ಕ್ಷೇತ್ರಗಳನ್ನು ಪ್ರತ್ಯೇಕ ಮಾಡಿ ಅಲ್ಲಿ ಹೊಸ ಜವಾಬ್ದಾರಿ ವಹಿಸಲಾಗುತ್ತಿದೆ. ಶಾಸಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ನಿರ್ಣಯಿಸಲಾಗಿದೆ.

ಹೆಚ್​ ಡಿ ಕುಮಾರಸ್ವಾಮಿ

ಪಕ್ಷ ಸಂಘಟನೆಗೆ 7 ವಲಯಗಳನ್ನು ಮಾಡಲಾಗಿದ್ದು, ಅದಕ್ಕೆ ವೀಕ್ಷಕರ ನೇಮಕವಾಗಿದೆ. ವೀಕ್ಷಕರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ವೀಕ್ಷಕರ ತಂಡಗಳು ಪಕ್ಷದ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿವೆ.

ಗಣೇಶ ಹಬ್ಬದ ನಂತರ ಆಯಾ ವಿಭಾಗಗಳ ವೀಕ್ಷಕರ ತಂಡಗಳು ಪ್ರವಾಸ ಕೈಗೊಂಡು ಪ್ರತಿದಿನ ಎರಡು ಜಿಲ್ಲೆಯಲ್ಲಿ ಹಳೆಯ ಸಮಿತಿ ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿವೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಜೆಡಿಎಸ್ ನಾಯಕರು, ಗಣೇಶ ಹಬ್ಬದ ನಂತರ ಪ್ರವಾಸ ಮಾಡಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಗೆ ಯುವಕರನ್ನು ತರಬೇಕು. ಈ ನಿಟ್ಟಿನಲ್ಲಿ ಹಿರಿಯರು ಸಹಕಾರ ನೀಡಬೇಕು.

ಪಕ್ಷವನ್ನು ಭವಿಷ್ಯದ ದೃಷ್ಟಿಯಲ್ಲಿ ಬಲಪಡಿಸಲು ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಎಲ್ಲರೂ ಒಮ್ಮತದಿಂದ ಸಹಕಾರ ನೀಡಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಜೆಡಿಎಸ್ ನಾಯಕರು

ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಸಂಘಟನೆಯನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳಲು ಕಾರ್ಯಕ್ರಮ ರೂಪಿಸಬೇಕು. ಸ್ಪರ್ಧಾಕಾಂಕ್ಷಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲು ಈಗಿನಿಂದಲೇ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಇನ್ನು, ವಲಯವಾರು ವೀಕ್ಷಕರ ತಂಡಗಳನ್ನು ರಚಿಸಲಾಗಿದೆ.

ಕಲ್ಯಾಣ ಕರ್ನಾಟಕ ವೀಕ್ಷಕರ ತಂಡ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಉಸ್ತುವಾರಿಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ್, ವೆಂಕಟರಾವ್ ನಾಡಗೌಡ, ಮಾಜಿ ಸಚಿವ ಎನ್ ಎಂ ನಬಿ, ಶಾಸಕ ನಾಗನಗೌಡ ಕಂದಕೂರ್, ರಾಜ ವೆಂಕಟಪ್ಪ ನಾಯಕ್ ದೊರೆ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಬೆಳಗಾವಿ ವಿಭಾಗ :ಬೆಳಗಾವಿ ವಿಭಾಗಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಉಸ್ತುವಾರಿಯಲ್ಲಿ ಶಾಸಕ ದೇವಾನಂದ ಚೌಹಾಣ್, ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ, ಭೀಮಪ್ಪ ಗುಂಡಪ್ಪ ಗಡಾದ, ಅಶೋಕ ನಿಂಗಯ್ಯ ಪೂಜಾರಿ, ನಾಸೀರ್ ಭಗವಾನ್, ಮಂಗಳಾದೇವಿ ಆರ್ ಬಿರಾದಾರ್, ಮಲ್ಲಿಕಾರ್ಜುನ ಯೆಂಡಿಗೆರಿ, ಹನುಮಂತಪ್ಪ ಮಾವಿನಮರದ ಅವರನ್ನು ನೇಮಿಸಲಾಗಿದೆ.

ಮಾಜಿ ಪ್ರಧಾನಿ ದೇವೇಗೌಡ

ಮೈಸೂರು ವಿಭಾಗ :ಮೈಸೂರು ವಿಭಾಗಕ್ಕೆ ಮಾಜಿ ಸಚಿವರಾದ ಹೆಚ್ ಡಿ ರೇವಣ್ಣ, ಸಾ ರಾ ಮಹೇಶ್, ಸಿ ಎಸ್ ಪುಟ್ಟರಾಜು, ಶಾಸಕರಾದ ಎಂ ಅಶ್ವಿನ್‍ಕುಮಾರ್, ಡಾ. ಕೆ ಅನ್ನದಾನಿ, ಮಾಜಿ ಶಾಸಕ ಚಿಕ್ಕಣ್ಣ, ಪಕ್ಷದ ಮುಖಂಡರಾದ ಮೊಹಮ್ಮದ್ ಜಫ್ರುಲ್ಲಾ ಖಾನ್, ಅಬ್ದುಲ್ ಅಜೀಜ್ ಅಬ್ದುಲ್ಲಾ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಅದೇ ರೀತಿ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಕೊಡಗು, ಮಲೆನಾಡು, ಅರೆ ಮಲೆನಾಡು ಮತ್ತು ಬಯಲು ಸೀಮೆಗೆ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕರಾದ ವೈಎಸ್‌ವಿ ದತ್ತ, ಹೆಚ್ ಎಸ್ ಶಿವಶಂಕರ್, ಶಾರದಾ ನಾಯಕ್ ಮತ್ತಿತರ ಮುಖಂಡರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ABOUT THE AUTHOR

...view details