ಕರ್ನಾಟಕ

karnataka

ETV Bharat / state

ಸ್ವತಂತ್ರ ಸರ್ಕಾರ ರಚಿಸಿ ಸಿಎಂ ಆಗುವ ಅವಕಾಶ ಕೊಟ್ಟು ನೋಡಿ: ಹೆಚ್.ಡಿ.ಕುಮಾರಸ್ವಾಮಿ - about janata mitra 5th day programme

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕಾದರೆ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಒಮ್ಮೆ ಸ್ವತಂತ್ರ ಅಧಿಕಾರ ಕೊಟ್ಟು ನೋಡಿ, ನಿಮಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ಜನತಾ ಮಿತ್ರ 5ನೇ ದಿನದ ಕಾರ್ಯಕ್ರಮದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಹೇಳಿದರು.

janata mitra 5 th day
ಜನತಾ ಮಿತ್ರ 5ನೇ ದಿನ

By

Published : Jul 7, 2022, 8:58 AM IST

ಬೆಂಗಳೂರು: ಮುಖ್ಯಮಂತ್ರಿಯಾಗು ಅಂದರೆ ಆಗುತ್ತೇನೆ. ಆದರೆ, ಸ್ವತಂತ್ರ ಸರ್ಕಾರದ ಮೂಲಕ ಸಿಎಂ ಆಗಬೇಕು. ಯಾರದ್ದೋ ಜೊತೆ ಸೇರಿ ಸರ್ಕಾರ ಮಾಡಲು ಆಗಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಗೋವಿಂದರಾಜನಗರದ ಕಾವೇರಿಪುರ ವಾರ್ಡ್​ನಲ್ಲಿ ಕಳೆದ ರಾತ್ರಿ ಹಮ್ಮಿಕೊಂಡಿದ್ದ ಐದನೇ ದಿನ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಚಿತ ಶಿಕ್ಷಣ, ಉಚಿತ ಆರೋಗ್ಯ ನಿಮಗೆ ಸಿಗಬೇಕು. ಸ್ವಾಭಿಮಾನದ ಬದುಕು ಕಟ್ಟಬೇಕೆಂದರೆ ಜನತಾ ದಳ ಅಧಿಕಾರಕ್ಕೆ ಬರಬೇಕು. ನಮಗೂ ಒಂದು ಅವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿದರು.

ಪಿಎಸ್​ಐ ಹಗರಣದ ಬಗ್ಗೆ ಮಾತನಾಡುತ್ತಾ, ಮೊನ್ನೆ ಅಧಿಕಾರಿಗಳ ಬಂಧನವಾಗಿದೆ. ಒಂದು ಸರ್ಕಾರಿ ಕೆಲಸ ಸಿಗಬೇಕು ಅಂದರೆ ಲಕ್ಷಾಂತರ ಹಣ ಕೊಡಬೇಕು. ಪಿಎಸ್​ಐ ಕೆಲಸಕ್ಕೆ ಹಣ ಕೊಟ್ಟಿದ್ದಾರಲ್ಲ, ಎಲ್ಲಿ ಸಾಲ ಮಾಡಿದ್ದಾರೋ ಗೊತ್ತಿಲ್ಲ.

ರಾಜ್ಯ ಸರ್ಕಾರ ತೆರಿಗೆ ಹಣವನ್ನು ಸ್ವೇಚ್ಚಾಚಾರವಾಗಿ ಖರ್ಚು ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ 24 ಕೋಟಿ ರೂ. ಖರ್ಚು ಮಾಡಿದ್ದಾರೆ. ಇಂದು ಆ ರಸ್ತೆ ಕಿತ್ತು ಹೋಗ್ತಿದೆ. ಮತ್ತೆ ಸಿಲಿಂಡರ್ ದರ ಏರಿಕೆಯಾಗಿದೆ. ನಿತ್ಯ ದರ ಏರಿಕೆ ಆಗುತ್ತಿದೆ. ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತಿದೆ. ಸರ್ಕಾರ ನಿಮ್ಮನ್ನು ಸುಲಿಗೆ ಮಾಡುತ್ತಿದೆ ಎಂದು ದೂರಿದರು.

ಇದನ್ನೂ ಓದಿ:ಆರಗ, ಸಿದ್ದು, ಹೆಚ್​ಡಿಕೆ ಸೇರಿ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 179 ಜನಪ್ರತಿನಿಧಿಗಳು

ABOUT THE AUTHOR

...view details