ಕರ್ನಾಟಕ

karnataka

ETV Bharat / state

ಜೆಡಿಎಸ್ ನವರು ಏನೇ ಮಾಡಲಿ, ಅವರು ಬಿಜೆಪಿ ಜೊತೆಗೇ ಸೇರಿಕೊಂಡಿದ್ದಾರೆ: ಸಿದ್ದರಾಮಯ್ಯ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಜೆಡಿಎಸ್​ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳಿಸ್ತೇನೆಂಬ ಸುಧಾಕರ್ ಹೇಳಿಕೆ ವಿಚಾರವಾಗಿ ಮಾತನಾಡಿ ಅವರಿಗೆ ಅಧಿಕಾರದ ಮದ ಏರಿದೆ. ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. 2023 ಕ್ಕೆ ಮನೆಗೆ ಹೋಗ್ತಾರೆ. ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ. ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದು ಎಂದರು.

JDS has joined the BJP:Siddaramaiah
ಸಿದ್ದರಾಮಯ್ಯ

By

Published : Oct 21, 2021, 5:22 PM IST

ಬೆಂಗಳೂರು: ಜೆಡಿಎಸ್​​ನವರು ಏನೇ ಮಾಡಲಿ, ಅವರು ಬಿಜೆಪಿ ಜೊತೆಗೇ ಸೇರಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರಿಗೆ ಯಾವ ಸಿದ್ಧಾಂತವಿದೆ. ಅಲ್ಪಸಂಖ್ಯಾತರು ಬಹಳ ಬುದ್ಧಿವಂತರಿದ್ದಾರೆ. ಜೆಡಿಎಸ್ ನವರಿಗೆ ಅಷ್ಟು ಈಸಿಯಾಗಿ ಒಲಿಯಲ್ಲ. ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿ ಜೊತೆ ಸೇರಿದ ಮೇಲೆ ಸೆಕ್ಯೂಲರ್ ಆಗ್ತಾರಾ? ಜೆಡಿಎಸ್ ಜಾತ್ಯಾತೀತ ಪಾರ್ಟಿಯಲ್ಲ. ಪ್ರಾದೇಶಿಕ ಪಾರ್ಟಿ ನಿಜ. ಆದರೆ, ಸೆಕ್ಯೂಲರ್ ಅಲ್ಲ. ಹೆಸರು ಮಾತ್ರ ಜಾತ್ಯಾತೀತ. ನಡವಳಿಕೆ ಮಾತ್ರ ಕೋಮುವಾದಿ ಎಂದು ಹರಿಹಾಯ್ದಿದ್ದಾರೆ.

ಸಿಎಂ ಇಬ್ರಾಹಿಂ ಜೆಡಿಎಸ್ ಸೇರುವ ವಿಚಾರ ಕುರಿತು ಮಾತನಾಡಿ, ನಾನು ಸಿಎಂ ಇಬ್ರಾಹಿಂ ಬಗ್ಗೆ ಮಾತನಾಡಲ್ಲ. ಅವರು ಕಾಂಗ್ರೆಸ್ ಎಂಎಲ್ ಸಿ ಅಷ್ಟೇ ಎಂದರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳಿಸ್ತೇನೆಂಬ ಸಚಿವ ಕೆ. ಸುಧಾಕರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅಧಿಕಾರದ ಮದ ಅವರಿಗಿದೆ. ಅಧಿಕಾರ ಶಾಶ್ವತ ಅಂತ ತಿಳಿದುಕೊಂಡಿದ್ದಾರೆ. 2023 ಕ್ಕೆ ಮನೆಗೆ ಹೋಗ್ತಾರೆ. ಯಾರನ್ನ ಯಾರು ಜೈಲಿಗೆ ಕಳಿಸ್ತಾರೆ ಗೊತ್ತಾಗುತ್ತೆ. ಅಪರಾಧ ಮಾಡಿದ್ರೆ ಮಾತ್ರ ಜೈಲಿಗೆ ಹಾಕಬಹುದು ಎಂದರು.

ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಬಾರಿ ಎರಡು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪರವಾದ ಅಲೆ ಇದೆ. ನಾವು ಸೀರಿಯಸ್ ಆಗಿಲ್ಲ ಅಂದರೆ ಹೇಗೆ ಎಂದು ಹೇಳಿದ್ದಾರೆ.

ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿಚಾರ ಮಾತನಾಡಿ, ಜನ ಸರ್ಕಾರದ ವಿರುದ್ಧ ತಿರುಗಿಬೀಳಬೇಕು. ಜನ ಎಲ್ಲವನ್ನ‌ ಸಹಿಸಿಕೊಂಡ್ರೆ ಹೇಗೆ? ಅದನ್ನ ಅವರು ಎನ್​ ಕ್ಯಾಶ್ ಮಾಡಿಕೊಳ್ತಾರೆ. ಜನ ಇವತ್ತು ಕಷ್ಟದಲ್ಲಿದ್ದಾರೆ. ಜನರೇ ಇದರ ಬಗ್ಗೆ ಧ್ವನಿ ಎತ್ತಬೇಕು. ಅಕ್ಟೋಬರ್ ಒಳಗೆ ಮೀಸಲಾತಿ ವರದಿ ಪಡೆಯಬೇಕು. ಇಲ್ಲವಾದರೆ ಪಾಠ ಕಲಿಸ್ತೇವೆಂಬ ಜಯಮೃತ್ಯುಂಜಯ ಶ್ರೀಗಳ ಹೇಳಿಕೆ ಕೇಳಿದ್ದೇನೆ. ಪಂಚಮಸಾಲಿಗೆ ಬದ್ಧ ಆಗಿದ್ದಾರೆ. ಸರ್ಕಾರ ಮೀಸಲಾತಿ ಬಗ್ಗೆ ಕಮಿಟ್ ಆಗಿದೆ. ಹಾಗಾಗಿ ಅದನ್ನ ಮಾಡಬೇಕಾಗುತ್ತದೆ. ಶ್ರೀಗಳು ಸರ್ಕಾರಕ್ಕೆ ಪಾಠ ಕಲಿಸಲಿ ಬೇಕಾದ್ರೆ ಎಂದು ಶ್ರೀಗಳ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮಾಜಿ ಸಂಸದ ಉಗ್ರಪ್ಪ ಮತ್ತು ಕಾಂಗ್ರೆಸ್​ ಮುಖಂಡ ಸಲೀಂ ಆಡಿಯೋ ವಿಚಾರ ಕುರಿತು ಮಾತನಾಡಿ ಸಿದ್ದರಾಮಯ್ಯ ಅವರು, ಬಿಜೆಪಿ ಶಾಸಕ ಯತ್ನಾಳ್ ಅವರು ಬಿಎಸ್​ವೈ ಭ್ರಷ್ಟಾಚಾರದ ಬಗ್ಗೆ ನೇರ ಆಪಾದನೆ ಮಾಡಿಲ್ವೇ?. ವಿಶ್ವನಾಥ್ ನೇರವಾಗಿ ಹೇಳಲಿಲ್ವೇ. ಯಾಕೆ ಅದರ ಬಗ್ಗೆ ಮಾತನಾಡ್ತಿಲ್ಲ. ಮಾತನಾಡಲಿ ಅದರ ಬಗ್ಗೆ ಬೇಕಾದರೆ. ನಾನು ಉಗ್ರಪ್ಪ, ಸಲೀಂ ಮಾತನಾಡಿದ್ದನ್ನು ನೋಡಿಲ್ಲ ಎಂದರು.

ರಾಜ್ಯದ ಬಿಜೆಪಿ ನಾಯಕರಿಗೆ ಧಂ ಇಲ್ಲ. ನಾವು ಭಿಕ್ಷುಕರಂತೆ ಅಲ್ಲಿ ಬೇಡಬೇಕಾ? ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲು ಕೇಳೋಕೆ ಆಗ್ತಿಲ್ಲ. ಸ್ಪೆಶಲ್ ಗ್ರಾಂಟ್ ಕೂಡ‌ ಬರ್ತಿಲ್ಲ. ಹೇಡಿಗಳ ರೀತಿ ನಡೆದುಕೊಳ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆರ್ ಎಸ್ ಎಸ್ ಬೈಯೋದು ಅಲ್ಪಸಂಖ್ಯಾತರ ಓಲೈಕೆಗಲ್ಲ. ಎಲ್ಲ ಪೊಲೀಸರಿಗೆ ಕೇಸರಿ‌ಶಾಲು ಹಾಕ್ತಾರೆ. ಪೊಲೀಸರಿಗೆ ತ್ರಿಶೂಲ ಕೊಟ್ಟು ಬಿಡಲಿ. ಕೇಸರಿ ಶಾಲು ಹಾಕಿದ್ದು ಪ್ರೀಪ್ಲಾನ್ಡ್. ಎಲ್ಲರೂ ಒಂದೇ ಕೇಸರಿ ಹಾಕಿದ್ದಾರೆ ಅಂದ್ರೆ ಏನರ್ಥ. ಒಂದೇ ಕಡೆ ಮೊದಲೇ ಪರ್ಚೇಸ್ ಮಾಡಿರೋದು ತಾನೇ ಎಂದರು.

ಬೈ ಎಲೆಕ್ಷನ್​ನಲ್ಲಿ ಬಿಜೆಪಿಯವರು ಹಣದ ಹೊಳೆ ‌ಹರಿಸ್ತಿದ್ದಾರೆ. ಒಂದು ವೋಟಿಗೆ 2 ಸಾವಿರ ಕೊಡ್ತಿದ್ದಾರಂತೆ. ಯಾವ ಸಾಧನೆ ಬಗ್ಗೆ ಹೇಳೋಕೆ ಆಗುತ್ತೆ. ಕೊರೊನಾದಲ್ಲಿ ಹಣ ಲೂಟಿ ಹೊಡೆದ್ರು. ಯಾವ ಅಭಿವೃದ್ಧಿ ಮಾಡಿದ್ದಾರೆ. ಒಂದೇ ಒಂದು ಮನೆ ಹೊಸದಾಗಿ ಕೊಟ್ಟಿದ್ದಾರಾ? ಜನ ಯಾಕೆ ಮತ ಹಾಕ್ತಾರೆ ಇವರಿಗೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ABOUT THE AUTHOR

...view details