ಕರ್ನಾಟಕ

karnataka

ಬಿಎಸ್​ವೈ ವಿಶ್ವಾಸಮತ ಯಾಚನೆಗೆ ಜೆಡಿಎಸ್​​ ಬಾಹ್ಯ ಬೆಂಬಲ ಹೇಳಿಕೆ ಸ್ವಾಗತಿಸಿದ ರೇಣುಕಾಚಾರ್ಯ

By

Published : Jul 27, 2019, 7:33 PM IST

ಯಡಿಯೂರಪ್ಪ ವಿಶ್ವಾಸಮತ ಯಾಚನೆ ಸಂದರ್ಭ ಜೆಡಿಎಸ್ ಬಾಹ್ಯ ಬೆಂಬಲ ನೀಡಲಿದೆ ಎಂಬ ಜೆಡಿಎಸ್​ ಶಾಸಕರ ಹೇಳಿಕೆಯನ್ನ ಸ್ವಾಗತ ಮಾಡುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ಧಾರೆ.

ರೇಣುಕಾಚಾರ್ಯ

ಬೆಂಗಳೂರು:ವಿಷಯಾಧಾರಿತ ಬೆಂಬಲ ನೀಡುವುದಾಗಿ ಹೇಳಿರುವ ದೇವೇಗೌಡರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಈ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಶಾಸಕ ರೇಣುಕಾಚಾರ್ಯ

ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗೆ ಈ‌ ಮೈತ್ರಿ ಸಾಕಾಗಿದೆ. ಈ ಕಾಂಗ್ರೆಸ್ ಸಹವಾಸದಿಂದ ಹಾಳಾದೆವು ಅಂತಾ ನಿನ್ನೆ‌ ಸಭೆಯಲ್ಲಿ ಹಲವಾರು ಶಾಸಕರು ಹೇಳಿದ್ದಾರಂತೆ. ಈ ಕುರಿತು ಕೆಲ ಶಾಸಕರು ನಂಗೆ ಇವತ್ತು ಬೆಳಗ್ಗೆ ದೂರವಾಣಿ‌ ಕರೆ ಮಾಡಿ ಹೇಳಿದರು. ನನ್ನ ಬಳಿ ಸಾಕ್ಷಿ ಕೂಡ ಇದೆ. ಅವರೆಲ್ಲರೂ ನನ್ನ ಮಿತ್ರರು. ಸಮಯ ಬಂದಾಗ ಹೆಸರು ಹೇಳುತ್ತೇನೆ. ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡುವ ಸಂದರ್ಭ ಜೆಡಿಎಸ್ ಬಾಹ್ಯ ಬೆಂಬಲ ಹೇಳಿಕೆಯನ್ನ ನಾನು ಸ್ವಾಗತ ಮಾಡುತ್ತೇನೆ. ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ ಎಂದು ಕೂಡ ಜೆಡಿಎಸ್ ಶಾಸಕರು ಸ್ಪಷ್ಟವಾಗಿ ಮಾತನಾಡಿದ್ದಾರೆ ಎಂದರು.

ಎಲ್ಲೆಲ್ಲಿ ಜೆಡಿಎಸ್ ಶಾಸಕರಿದ್ದಾರೋ, ಬಿಜೆಪಿ ಶಾಸಕರು ಇಲ್ಲವೋ ಆ ಎಲ್ಲ ಪ್ರದೇಶಗಳಲ್ಲಿ ಬಿಜೆಪಿ ಜೊತೆ ಸಖ್ಯ ಮಾಡಿಕೊಳ್ಳುವುದು ಸೂಕ್ತ ಎಂದು ಕುಮಾರಸ್ವಾಮಿಯವರಿಗೂ ಮನವರಿಕೆ ಮಾಡಿಕೊಟ್ಟಿದ್ದಾಗಿ ಶಾಸಕರು ಹೇಳಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದರು.

ABOUT THE AUTHOR

...view details