ಬೆಂಗಳೂರು: ಹತ್ತು ಗಂಟೆಗೆ ಸದನ ಪ್ರಾರಂಭ ಮಾಡಬೇಕೆಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದರೂ ಕೂಡ ದೋಸ್ತಿ ಸರ್ಕಾರದ ನಾಯಕರು ಸದನಕ್ಕೆ ಬಾರದೆ ಬೇಜವಾಬ್ದಾರಿ ತೋರಿದ್ದು, 10.30ರ ಶುಭ ಗಳಿಗೆ ನೋಡಿ ಸದನಕ್ಕೆ ಹೋಗಿದ್ದರು. ಈ ವಿಷಯ ಈಗ ಭರ್ಜರಿ ಚರ್ಚೆಯಾಗುತ್ತಿದೆ.
ಈಗಾಗಲೇ ಸದನದೊಳಗೆ ಸ್ಪೀಕರ್ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರು ಹಾಜರಿದ್ದಾರೆ. ಹಾಗೇ ದೋಸ್ತಿ ಪಾಳಯದಲ್ಲಿ ಎ.ಟಿ. ರಾಮಸ್ವಾಮಿ, ಸಚಿವ ಪ್ರಿಯಂಕ ಖರ್ಗೆ ಸದನಕ್ಕೆ ಹಾಜರಾಗಿದ್ದರು. ಆದ್ರೆ ಇತರ ದೋಸ್ತಿ ನಾಯಕರು ಸುಪ್ರೀಂಕೋರ್ಟ್ ವಿಚಾರಣೆ ನೋಡಿಕೊಂಡು ಸದನಕ್ಕೆ ಬರುವ ಹುನ್ನಾರದಲ್ಲಿದ್ದರು ಎಂಬ ಮಾತುಗಳು ಕೇಳಿ ಬಂದವು.