ಬೆಂಗಳೂರು:ನಾನು ಎಂದೂ ಕೋಮುವಾದಿ ಬಿಜೆಪಿ ಜೊತೆ ಸೇರುವುದಿಲ್ಲ. ನಮ್ಮದು ಜಾತ್ಯಾತೀತ ಎಂದು ಹೇಳಿದವರು ಈಗ ಬಿಜೆಪಿ ಉತ್ತಮ ಎನ್ನುತ್ತಿರುವುದು ಯಾಕೆ ಎಂದು ಗೊಂದಲ ಮೂಡುತ್ತಿದೆ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಪರೋಕ್ಷವಾಗಿ ದೇವೇಗೌಡರ ಹೇಳಿಕೆಗಳಿಗೆ ವ್ಯಂಗ್ಯವಾಡಿದ್ದಾರೆ.
ಆಗ ಕೋಮುವಾದಿ ಅಂದ್ರು, ಈಗ ಉತ್ತಮ ಅಂತಿದಾರೆ: ಚೆಲುವರಾಯಸ್ವಾಮಿ - bangalore news today
ಬಿಜೆಪಿಯನ್ನು ಕೋಮುವಾದಿ ಎಂದು ತೆಗಳಿದವರು. ಈಗ ಉತ್ತಮ ಎಂದು ಹೊಗಳುತ್ತಿರುವುದು ಯಾಕೆ ಅಂತ ತಿಳಿಯುತ್ತಿಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ ಎಂದು ಭಯ ಪಟ್ಟಿದ್ದಾರೆಯೇ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ದೇವೇಗೌಡರನ್ನು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಚೆಲುವರಾಯಸ್ವಾಮಿ
ಸಿದ್ದರಾಮಯ್ಯ ನೇರವಾದಿ ವ್ಯಕ್ತಿತ್ವದವರು. ಒರಟು ಸ್ವಭಾವದವರು. ಆದರೆ, ಬೆನ್ನಿಗೆ ಚೂರಿ ಹಾಕುವವರಲ್ಲ. ಇಂತಹ ಹೇಳಿಕೆಗಳಿಂದ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುತ್ತಿದೆ ಎಂದು ನೇರವಾಗಿ ದೂರಿದರು.
ಸಿದ್ದರಾಮಯ್ಯ ಮಾತ್ರ ಉತ್ತರ ಕೊಟ್ಟರೆ ಸಾಲದು. ರಾಷ್ಟ್ರೀಯ ಪಕ್ಷವೂ ಪ್ರತಿಕ್ರಿಯಿಸಬೇಕು ಎಂದರು.ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಮೋಸ ಮಾಡಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಮೋಸ ಅಲ್ವಾ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಿ ಹಿಡಿದಿರುವುದು ಭಯ ಮೂಡಿಸಿದೆಯೇ ಎಂದು ಪ್ರಶ್ನಿಸಿದರು.