ಬೆಂಗಳೂರು:ರಾಜರಾಜೇಶ್ವರಿನಗರ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಿ. ಕೃಷ್ಣಮೂರ್ತಿ 2.66 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಚುನಾವಣಾಧಿಕಾರಿಗೆ ಇಂದು ಸಲ್ಲಿಸಿರುವ ಆಸ್ತಿ ವಿವರದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು ಯಾವುದೇ ಸಾಲವನ್ನು ಹೊಂದಿಲ್ಲ ಎಂದು ತಿಳಿಸಲಾಗಿದೆ.
ಸಾಲವಿಲ್ಲದ ಸುಖಜೀವಿ ಆರ್ಆರ್ ನಗರ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ... ಇವರ ಆಸ್ತಿ ಎಷ್ಟು? - by-election 2020
ಆರ್ ಆರ್ ನಗರದ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ತಮ್ಮ ಆಸ್ತಿ ವಿವರನ್ನು ಘೋಷಿಸಿಕೊಂಡಿದ್ದಾರೆ. ಯಾವುದೇ ಕ್ರಿಮಿನಲ್ ಕೇಸ್ ಇಲ್ಲ ಎಂದು ತಮ್ಮ ಆಸ್ತಿ ವಿವರದಲ್ಲಿ ನಮೂದಿಸಿರುವ ಕೃಷ್ಣಮೂರ್ತಿ, 2.66 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
1.75 ಲಕ್ಷ ರೂ. ನಗದು ಹೊಂದಿರುವ ಕೃಷ್ಣಮೂರ್ತಿ ಹೆಸರಲ್ಲಿ 16.01 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 1.83 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಬಳಿ 2.35 ಲಕ್ಷ ರೂ. ನಗದು ಇದ್ದು, 5.56 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 58.80 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇಬ್ಬರು ಮಕ್ಕಳ ಹೆಸರಲ್ಲಿ 3 ಲಕ್ಷ ರೂ. ಮೌಲ್ಯ ಚರಾಸ್ತಿ ಇದೆ. ಕೃಷ್ಣಮೂರ್ತಿ ಹೆಸರಲ್ಲಿ 90 ಸಾವಿರ ರೂ. ಮೌಲ್ಯದ 150 ಗ್ರಾಂ ಚಿನ್ನ, ಪತ್ನಿ ಬಳಿ 3.15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದೆ. 34 ಲಕ್ಷ ರೂ. ಮೌಲ್ಯದ ಮೂರು ಎಲ್ಐಸಿ ಪಾಲಿಸಿಗಳನ್ನು ಹೊಂದಿದ್ದು, 10,50,000 ಪ್ರೀಮಿಯಂ ಕಟ್ಟಿದ್ದಾರೆ.
ಇನ್ನೂ ಅವಲಂಬಿತರ ಬಳಿ 2 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಒಂದು ಎಕರೆ 20 ಗುಂಟೆ ಪಿತ್ರಾರ್ಜಿತ ಕೃಷಿ ಭೂಮಿ, ಯಶವಂತಪುರದ ಮಲ್ಲತ್ತಹಳ್ಳಿಯಲ್ಲಿ 18 ಗುಂಟೆ, ಉಳ್ಳಾಲದಲ್ಲಿ 1 ಎಕರೆ 16 ಗುಂಟೆ, 3 ಎಕರೆ 17 ಗುಂಟೆ ಕೃಷಿಯೇತರ ಭೂಮಿ ಹಾಗೂ ಮಲ್ಲತಹಳ್ಳಿಯಲ್ಲಿ 130 x 124 ಚದರ ಅಡಿ ನಿವೇಶನ ಹೊಂದಿದ್ದಾರೆ. ಅವರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ ಎಂದು ಆಸ್ತಿ ವಿವರದಲ್ಲಿ ನಮೂದಿಸಿದ್ದಾರೆ.