ಬೆಂಗಳೂರು :ಉಪ ಚುನಾವಣೆ ಶಿವಾಜಿನಗರ ಕ್ಷೇತ್ರದ ಮತ ಎಣಿಕೆ ಚುರುಕುಗೊಂಡಿದ್ದು, ಮತ ಎಣಿಕೆ ನಡೆಯುತ್ತಿರುವ ಮೌಂಟ್ ಕಾರ್ಮೆಲ್ ಕಾಲೇಜಿಗೆ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ವುಲ್ಲಾ ಭೇಟಿ ನೀಡಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಜೆಡಿಎಸ್ ಅಭ್ಯರ್ಥಿ - ಶಿವಾಜಿನಗರ ಕ್ಷೇತ್ರ ಮತ ಎಣಿಕೆ ಲೆಟೆಸ್ಟ್ ನ್ಯೂಸ್
ಚುನಾವಣೆ ದಿನದಿಂದ ಕ್ಷೇತ್ರದಲ್ಲಿ ಕಾಣೆಯಾಗಿದ್ದ ತನ್ವೀರ್ ಅವರು ಇಂದು ಮತ ಎಣಿಕೆ ಕೇಂದ್ರದಲ್ಲಿ ಪ್ರತ್ಯಕ್ಷರಾಗಿದ್ದು, ಇಂದು ಮತ ಎಣಿಕೆ ನಡೆಯುತ್ತಿರುವ ಮೌಂಟ್ ಕಾರ್ಮೆಲ್ ಕಾಲೇಜಿಗೆ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ವುಲ್ಲಾ ಭೇಟಿ ನೀಡಿದ್ದಾರೆ.
JDS candidate Tanveer Ahmad Ulla
ಚುನಾವಣೆ ದಿನದಿಂದ ಕ್ಷೇತ್ರದಲ್ಲಿ ಕಾಣೆಯಾಗಿದ್ದ ತನ್ವೀರ್ ಅವರು ಇಂದು ಮತ ಎಣಿಕೆ ಕೇಂದ್ರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸದ್ಯ ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 4800 ಮತಗಳಿಂದ ಮುನ್ನಡೆ ಗಳಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಶರವಣ ಇದ್ದು, ಮೂರನೇ ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ ವುಲ್ಲಾ ಇದ್ದಾರೆ.
ಇನ್ನು ಚುನಾವಣೆ ಪ್ರಚಾರ ವೇಳೆ ತನ್ವೀರ್ ಕಾಂಗ್ರೆಸ್ ಅಭ್ಯರ್ಥಿ ನನಗೆ ಸ್ಪರ್ಧಿಯಲ್ಲ. ಶರವಣ ನನ್ನ ಎದುರಾಳಿ ಎಂದಿದ್ದನು ನಾವಿಲ್ಲಿ ಸ್ಮರಿಸಬಹುದಾಗಿದೆ.
TAGGED:
bangalore latest news